ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗಲಿ

Published on

ಸಿಂಧನೂರು: ನಗರದ ಬಪ್ಪೂರು ರಸ್ತೆಯ ನಗರಸಭೆಯ ಕಸ ಮತ್ತು ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸೋಮವಾರ ಭೇಟಿ ನೀಡಿದರು.

ಮಲ್ಲಾಪುರ, ದೇವರಗುಡಿ ಗ್ರಾಮಸ್ಥರು ಹಾಗೂ ಇಂದಿರಾನಗರ, ಬಡಿಬೇಸ್ ವಾರ್ಡ್‌ಗಳ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡ ಎಂಎಲ್‌ಸಿ ಬಸನಗೌಡ ಬಾದರ್ಲಿ, ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಹಚ್ಚಿದ್ದು ಯಾರೆಂಬ ಕುರಿತು ತನಿಖೆ ಆಗಬೇಕು. ಕಳೆದ 8 ದಿನಗಳಿಂದಲೂ ಬೆಂಕಿ ನಂದಿಸಬೇಕಿತ್ತು. ದಟ್ಟವಾದ ಹೊಗೆ ಮತ್ತು ದುರ್ವಾಸನೆಯಿಂದ ಜನರು ತೊಂದರೆಗೆ ಒಳಗಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ದಮ್ಮು, ಕೆಮ್ಮು ಮತ್ತು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಸಿ ಮತ್ತು ಒಣ ಕಸ ಬೇರ್ಪಡಿಸಿ ಹಾಕಬೇಕೆಂಬ ನಿಯಮವಿದ್ದರೂ ಯಾಕೆ ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದೀರಿ. ಸತ್ತ ನಾಯಿ, ಹಂದಿ, ದನ ಮತ್ತಿತರ ಪ್ರಾಣಿಗಳನ್ನು ಇಲ್ಲಿಗೆ ಯಾಕೆ ತಂದು ಹಾಕುತ್ತಿದ್ದೀರಿ. ಜೊತೆಗೆ ಆಸ ್ಪತೆ ್ರಗಳಲ್ಲಿ ಬಳಸಿದ ತ್ಯಾಜ್ಯ ಇಲ್ಲಿ ಹಾಕಬಾರದು ಎಂದು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಮುಖರಾದ ವೆಂಕೋಬ ನಾಯಕ, ದೇವರಡ್ಡಿ ಕೆಸರಟ್ಟಿ, ಮಲ್ಲಿಕಾರ್ಜುನ, ಶೇಖರಪ ್ಪ, ನಿರುಪಾದಿ, ಪ್ರಭು ದೇವರಗುಡಿ, ದುಗ್ಗಪ ್ಪ ಮಲ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net