

ಮೂಡಲಗಿ: ಅಂತರಂಗ ಶುದ್ಧಗೊಳಿಸುವ ವಚನಗಳನ್ನು ಆಧುನಿಕ ಕಾಲಘಟ್ಟದಲ್ಲಿ ಹೆಚ್ಚು ಪ್ರಚುರಪಡಿಸಬೇಕಾಗಿದೆ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು. ತಾಲೂಕು ಕಸಾಪ, ಕನ್ನಡ ಜಾನಪದ ಪರಿಷತ್‌ನಿಂದ ಪಟ್ಟಣದ ನೀಲಕಂಠೇಶ್ವರ ಮಠದಲ್ಲಿ ಈಚೆಗೆ ಏರ್ಪಡಿಸಿದ್ದ ಡಾ.ಮಹಾದೇವ ಪೋತರಾಜ ಅವರ ‘ಸುವರ್ಣದೀಪ ವಚನ ಸಂಕಲನ’ ಬಿಡುಗಡೆ ಮತ್ತು ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಪ್ರಾಚಾರ್ಯ ಡಾ. ಆರ್.ಬಿ. ಕೊಕಟನೂರ, ಸಾಹಿತಿ ಬಾಲಶೇಖರ ಬಂದಿ, ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಕೃತಿಕಾರ ಡಾ. ಮಹಾದೇವ ಪೋತರಾಜ, ಅಣ್ಣಪ್ಪ ವಂಟಗೋಡಿ ಮಾತನಾಡಿದರು. ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಮಲಾಬಾಯಿ ಚಂದ್ರಪ್ಪ ಪೋತರಾಜ, ಚಿತ್ರಕಲಾ ಶಿಕ್ಷಕ ಸುಭಾಷ ಕುರಣಿ, ನಾಗಪ್ಪ ಗಡಾದ ಹಾಗೂ ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು. ನೀಲಕಂಠ ಸೇವಾ ಸಮಿತಿಯ ಅಧ್ಯಕ್ಷ ಈಶ್ವರ ಮುರಗೋಡ, ಜಿ.ಕೆ. ಮುರಗೋಡ, ಸಾಹಿತಿ ಸಿದ್ರಾಮ ದ್ಯಾಗಾನಟ್ಟಿ, ಚು.ಸಾ.ಪ ಅಧ್ಯಕ್ಷ ಚಿದಾನಂದ ಹೂಗಾರ, ಹಳ್ಳೂರದ ಸಿದ್ದು ಮಹಾರಾಜ, ನಿಂಗಪ್ಪ ಸಂಗ್ರೋಜಿಕೊಪ್ಪ, ಬಿ.ವೈ. ಶಿವಾಪುರ, ಬಸವರಾಜ ತರಕಾರ, ಸುಭಾಷ ಕಡಾಡಿ, ಶಾನೂರ್ ಐಹೊಳಿ, ಬಿ.ಸಿ. ಹೆಬ್ಬಾಳ, ಶಿವಾನಂದ ಚಂಡಕಿ, ಬಿ.ಎ. ದೇಸಾಯಿ, ಪೂರ್ಣಿಮಾ ಯಲಿಗಾರ, ಶಶಿರೇಖಾ ಬೆಳ್ಳಕ್ಕಿ, ಭಾಗೀರಥಿ ಕುಳಲಿ, ಖನ್ನವ್ವ ಸೊಪ್ಪಡಲಾ ಇದ್ದರು.