

ವಿಜಯವಾಣಿ ಸುದ್ದಿಜಾಲ ಧಾರವಾಡ
ಹದಿಹರೆಯದ ಸಂದರ್ಭವು ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ದೇಹದಲ್ಲಿನ ಹಾಮೋರ್ನ್ಗಳ ಪರಿವರ್ತನೆ ಸಮಯ. ಇಂತಹ ಚಂಚಲತೆಯಲ್ಲಿ ಜೀವನದ ಸ್ಪಷ್ಟತೆ ಕಂಡುಕೊಳ್ಳುವ ವಿಚಾರ ಹೆಚ್ಚಾಗಿರುತ್ತದೆ ಎಂದು ಡಿಮ್ಹಾನ್ಸ್ ಟೆಲಿಮಾನಸ ಸಹಾಯಕ ಪ್ರಾಧ್ಯಾಪಕ ಡಾ. ಸುಧೀಂದ್ರ ಹುದ್ದಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಕಾನೂನು ಮಂಟಪವು ಚೆನ್ನಮ್ಮನ ಕಿತ್ತೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾಥಿರ್ ಜೀವನವನ್ನು ಯಶಸ್ವಿಗೊಳಿಸುವುದು ಹೇಗೆ? ಕುರಿತು ಉಪನ್ಯಾಸ ನೀಡಿದರು.
ವಿದ್ಯಾಥಿರ್ಗಳ ಮುಂದಿನ ಜೀವನ ಏನು? ಎತ್ತ ಎಂದು ತಿಳಿಯದ ಮುಗ್ಧ ವಯಸ್ಸು. ಎಲ್ಲವನ್ನು ತಿಳಿದುಕೊಳ್ಳುವ ಹಂಬಲ, ಉತ್ಕಟ ಆಸೆ, ದುಗುಡ ಆತಂಕಕ್ಕೆ ಸೆಳೆಯುತ್ತದೆ. ವ್ಯಕ್ತಿತ್ವ ಬೆಳವಣಿಗೆ ಸಮಯ. ಈ ಸಮಯವನ್ನು ತಾವು ಒಳ್ಳೆಯ ಸಹವಾಸ, ಉತ್ತಮ ಜ್ಞಾನ ಪಡೆದ ವ್ಯಕ್ತಿಗಳ ಜತೆಗೆ ಒಡನಾಟ ಇದ್ದರೆ ನಿಮ್ಮ ಮುಂದಿನ ಗುರಿ ಮತ್ತು ಭವಿಷ್ಯ ಹಾದಿ ಸುಗಮವಾಗುತ್ತದೆ ಎಂದರು.
ಕಲ್ಮಠ ರಾಜಗುರು ಸಂಸ್ಥಾನ ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಜಿ.ಕೆ. ಬೊಮ್ಮನಗೌಡರ, ಸುರೇಶ ನಾಯ್ಕ, ಅರುಣ ಕುಮಾರ ಬಿಕ್ಕಣ್ಣವರ, ಇತರರು ಇದ್ದರು.
ಸಿ. ಸಿ. ಮಹಾಜನಶೆಟ್ಟರ ಸ್ವಾಗತಿಸಿದರು. ಅಶೋಕ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜೆ. ಶಾಪೂರಮಠ ವಂದಿಸಿದರು.