ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲಿ

press meet
press meet
Published on

ರಾಯಚೂರು ಆದಿ ಕವಿ ಶ್ರೀ ಮಹರ್ಷಿ ವಾಲ್ಮಿಕಿ ವಿಶ್ವ ವಿದ್ಯಾಲಯಕ್ಕೆ ಕಳೆದ ೮ ತಿಂಗಳಿನಿAದ ಕುಲಪತಿ ಇಲ್ಲದೆ ಹಂಗಾಮಿ ಕುಲಪತಿಯಿಂದ ಕಾರ್ಯಭಾರ ಮಾಡಲಾಗುತ್ತಿದ್ದು, ಸರ್ಕಾರ ಕುಲಪತಿಗಳ ನೇಮಕಕ್ಕೆ ಶೀಘ್ರ‍್ರವೇ ಮುಂದಾಗಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ರಘುವೀರ ನಾಯಕ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦೨೧ರಲ್ಲಿ ಗುಲ್ಬರ್ಗ ವಿಶ್ವ ವಿದ್ಯಾಲಯದಿಂದ ಬೇರ್ಪಡಿಸಿ ಪ್ರತೇಕ ವಿಶ್ವವಿದ್ಯಾಲಯವಾಗಿ ಸ್ಥಾಪನೆಯಾಗಿ ೪ ವರ್ಷಗಳು ಕಳಿದಿವೆ ಆದರೆ ವಿಶ್ವ ವಿದ್ಯಾಲಯಕ್ಕೆ ಬೇಕಿರುವ ಸಿಬ್ಬಂದಿಗಳು ಕೇವಲ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದು ಬಿಟ್ಟರೆ ಈವರೆಗೆ ಹೆಚ್ಚಿನ ಅನುದಾನ ನೀಡಿಲ್ಲವೆಂದು ದೂರಿದರು.

ರಾಜ್ಯದಲ್ಲಿ ಎಲ್ಲಾ ವಿದ್ಯಾಲಯಕ್ಕೆ ಹೋಲಿಸಿದರೆ ಆದಿ ಕವಿ ಶ್ರೀ ಮಹರ್ಷಿ ವಾಲ್ಮಿಕಿ ವಿಶ್ವ ವಿದ್ಯಾಲಯವು ವರ್ಷಕ್ಕೆ ೩೯ ಕೋಟಿ ಆದಾಯ ಸರ್ಕಾರಕ್ಕೆ ನೀಡುತ್ತಿದೆ, ಇದು ರಾಜ್ಯದಲ್ಲಿ ಹೆಚ್ಚು, ಆದರೂ ಸರ್ಕಾರ ನೇಮಕಾತಿ ಸೇರಿದಂತೆ ಅಭಿವೃದ್ಧಿಗೆ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದರು.

ಕುಲಪತಿಗಳ ನೇಮಕ ವಿಚಾರದಲ್ಲಿ ಅರ್ಜಿ ಕರೆದು ಈ ಭಾಗದವರಿಗೆ ಆಧ್ಯತೆ ನೀಡಬೇಕು. ಕುಲಪತಿಗಳ ನೇಮಕ ಮಾಡಲು ಸರ್ಕಾರ ಕೂಡಲೇ ಕ್ರಮ ವಹಿಸಿ ಈ ಭಾಗದವರನ್ನು ಕುಲಪತಿಗಳ ನೇಮಕ ಮಾಡಬೇಕು ಹಾಗೂ ಬೋಧಕ ಬೋದಕೇತರ ನೇಮಕಾತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಮಣ್ಣ ನಾಯಕ, ರಾಚಣ್ಣ ನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net