ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಲಿ

24 KMP 02
ಕಂಪ್ಲಿಯಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವಸಂತರಾಜ ಕಹಳೆ, ಟಿ.ಎಚ್.ಎಂ.ರಾಜಕುಮಾರ್, ಸಣಾಪುರ ಮರಿಸ್ವಾಮಿ, ಕೆ.ಲಕ್ಷ್ಮಣ, ರವಿ ಮಣ್ಣೂರು ಇತರರಿದ್ದರು.
Published on

ಕಂಪ್ಲಿ: ಕೇಂದ್ರ ಗೃಹ ಸಚಿವ ಅಮಿತ್‌ಷಾ ಹೇಳಿಕೆ ಖಂಡಿಸಿ ಕಂಪ್ಲಿ ನಾನಾ ಸಂಘಟನೆಗಳು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದವು.

ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಗೃಹ ಸಚಿವರು ತಮ್ಮ ಸ್ಥಾನಘನತೆಯನ್ನು ಮರೆತು, ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ್ದು ಖಂಡನಾರ್ಹ. ಅಮಿತ್‌ಷಾ ಅವರನ್ನು ಗೃಹ ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಾಂತಪ್ಪ ಪೂಜಾರಿ, ಈ.ಧನಂಜಯ, ಸಿ.ಬಸವರಾಜ, ಎನ್.ಬುಜ್ಜಿಕುಮಾರ, ನಂ.10ಮುದ್ದಾಪುರ ಗೋಪಾಲ, ಎಸ್.ಬಸವರಾಜ, ಮೆಟ್ರಿ ಬಸಪ್ಪ, ಯಲ್ಲಪ್ಪ, ಸಾಮಿಲ್ ವಿ.ಶೇಖಪ್ಪ, ವಿ.ಗೋವಿಂದಪ್ಪ, ಸಿ.ರಾಮಪ್ಪ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net