

ಚಿತ್ರದುರ್ಗ:ಪ್ರಜಾಪ್ರಭುತ್ವದಲ್ಲಿ ಮತದಾನ ಬಹುಮುಖ್ಯ ಪ್ರಕ್ರಿಯೆ. ಚುನಾವಣಾ ಜಾಗೃತ ಸಂಘಗಳು ಜನರಲ್ಲಿ ಮತದಾನದ ಮಹತ್ವದ ಕುರಿತು ಸೂಕ್ತ ತಿಳಿವಳಿಕೆ ಮೂಡಿಸಬೇಕು ಎಂದು ಚುನಾವಣಾ ಜಾಗೃತ ಸಂಘಗಳ ಜಿಲ್ಲಾ ನೋಡಲ್ ಅಧಿಕಾರಿ ಸಿ.ಎಸ್.ವೆಂಕಟೇಶ್ ಹೇಳಿದರು.
ನಗರದ ಡಯಟ್ ಕಚೇರಿಯಲ್ಲಿ ಬುಧವಾರ ಕಸಬಾ ಹೋಬಳಿ ವ್ಯಾಪ್ತಿ ಬಿಎಲ್‌ಒ, ಇಎಲ್‌ಸಿ ಸಂಚಾಲಕರು ಹಾಗೂ ಕ್ಯಾಂಪಸ್ ಅಂಬಾಸಿಡರ್‌ಗಳಿಗೆ ಏರ್ಪಡಿಸಿದ್ದ ಮತದಾನ ಜಾಗೃತಿ ಕುರಿತು ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಅರಿವು ಮೂಡಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ತಿಳಿಸಿದರು. ಪ್ರಭಾರ ಬಿಇಒ ಇ.ಸಂಪತ್‌ಕುಮಾರ್ ಮಾತನಾಡಿ, ಯುವಜನರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರಿಪಿಸಬೇಕು ಹಾಗೂ ಭವಿಷ್ಯದ ಮತದಾರರಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ಉಪ ಪ್ರಾಂಶುಪಾಲ ಡಿ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಉಪನ್ಯಾಸಕ ಬಸವರಾಜ್ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಇಎಲ್‌ಸಿ ತಾಲೂಕು ನೋಡಲ್ ಅಧಿಕಾರಿ ಇನಾಯತ್ ಸ್ವಾಗತಿಸಿದರು.