ಸಾಲುಮರದ ತಿಮ್ಮಕ್ಕ ನಮಗೆ ಆದರ್ಶವಾಗಲಿ

kdr 1 (2)
Published on

ಕಡೂರು: ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ ಎಂದು ರೋಟರಿ ಕ್ಲಬ್ ಅಧ್ಯಕ್ಷ ಟಿ.ಡಿ.ರಾಜನ್ ಹೇಳಿದರು.

ಬಿಸಿಲೇಹಳ್ಳಿ ಗ್ರಾಮದ ಶ್ರೀಬಾಬು ನರೇಂದ್ರ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದನ್ನು ನಾವು ಕಡ್ಡಾಯವಾಗಿ ಪಾಲಿಸ ಬೇಕು. ಒಂದು ಮನೆ ಒಂದು ಮರ ಎನ್ನುವ ಚಿಂತನೆಯೊಂದಿಗೆ ಸಾಲು ಮರದ ತಿಮ್ಮಕ್ಕನನ್ನು ನಾವು ಆದರ್ಶವಾಗಿಟ್ಟುಕೊಂಡು ಅವರ ಪದ್ಧತಿಯನ್ನು ನಾವುಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ವಚನ ಸಾಹಿತ್ಯ ಅತ್ಯಂತ ಶ್ರೀಮಂತವಾದ ಹಾಗೂ ಶರಣ ಸಂಸ್ಕೃತಿ ಬಿಂಬಿಸುವ ಕಲ್ಪನೆಯಾಗಿದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ವಿಶೇಷ ಕೊಡುಗೆ ನೀಡಿದೆ. ಬಸವಣ್ಣನವರು ಹಾಗೂ ಅಂದಿನ ಎಲ್ಲ ಶಿವಶರಣರು ಕಾಯಕ ದಾಸೋಹಗಳಿಗೆ ಹೆಚ್ಚು ಮನ್ನಣೆ ನೀಡಿ ಮಾನವೀಯತೆಯನ್ನು ಮುಂಚೂಣಿಗೆ ತಂದರು. ಅನುಭವಿಗಳು ಜಾತಿ ಮತ ಪಂಥ ಪರಂಪರೆ ಹುಚ್ಚ ನೀಚ ಗಂಡು-ಹೆಣ್ಣು ಎಂಬ ಭೇದ ಭಾವಗಳನ್ನೆಲ್ಲ ತೊರೆದು ಹಾಕಿ ಎಲ್ಲರಿಗೂ ಸಮಾನತೆ ನೀಡಿದವರು ಶರಣರು. ಅಂಬೇಡ್ಕರ್ ಅವರು ಕನ್ನಡ ನಾಡಿನಲ್ಲಿ ಜನಿಸಿದ್ದರೆ ಅವರು ಬಸವಣ್ಣನವರ ಅನುಯಾಯಿಗಳಾಗುತ್ತಿದ್ದರು ಎಂದರು.

ಕಡೂರು ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಕೆ.ಹೆಚ್.ಶ್ರೀನಿವಾಸ್, ಬಿ.ವಿ. ರಾಜಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಯುವ ಘಟಕದ ಅಧ್ಯಕ್ಷ ಪ್ರಿಯಾಂಕ ಭರತ್, ಪ್ರೌಢಶಾಲಾ ಮುಖ್ಯಶಿಕ್ಷಕರ ಆರ್.ಸತೀಶ್, ದಲಿತ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕುಪ್ಪಾಳು ಶಾಂತ ಮೂರ್ತಿ, ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ , ಕವಿ ಲೇಖಕಿ ಗೀತಾ ಹಾಸ್ಮಕಲ್, ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net