ಶೌಚಗೃಹ ನಿರ್ಮಿಸಿಕೊಳ್ಳಲಿ

21ckd2
Published on

ಚಿಕ್ಕೋಡಿ: ಪ್ರತಿಯೊಬ್ಬರೂ ಮನೆಯಲ್ಲಿ ಶೌಚಗೃಹ ನಿರ್ಮಿಸಿಕೊಳ್ಳುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ತಾಪಂ ಇಒ ಎಸ್.ಎಸ್.ಕಾದ್ರೋಳಿ ಹೇಳಿದರು.

ಇಲ್ಲಿನ ತಾಪಂ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಶೌಚಗೃಹ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ‘ನಮ್ಮ ಶೌಚಗೃಹ ನಮ್ಮ ಗೌರವ’ ಎಂಬ ಶೀರ್ಷಿಕೆಯಡಿ ಅಂದದ ಶೌಚಗೃಹ ಆನಂದದ ಜೀವನ ಘೋಷ ವಾಕ್ಯದೊಂದಿಗೆ ಡಿ.10ರ ವರಗೆ ಆಂದೋಲನ ಹಮ್ಮಿಕೊಂಡು ಶೌಚಗೃಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವಿ, ವ್ಯವಸ್ಥಾಪಕ ಉದಯಗೌಡ ಪಾಟೀಲ, ಸಿಡಿಪಿಒ ಸಂತೋಷ ಕಾಂಬಳೆ, ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಶಿವಕುಮಾರ ಭಾಗಾಯಿ,

ವಿಷಯ ನಿರ್ವಾಹಕ ಬಸವರಾಜ ಕುರಣೆ, ಐಇಸಿ ಸಂಯೋಜಕರು ಹಾಗೂ ತಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net