ಮನದಲ್ಲಿ ಮೂಡಲಿ ಪರಿವರ್ತನೆಯ ಚಿಂತನೆ

Karki
Published on

ಶಿರಸಿ: ಮನುಷ್ಯ ಒಳ್ಳೆಯವನಾಗಬೇಕು ಎಂಬ ಚಿಂತನೆ ಮಾಡಿದರೆ ಸಾಕು ಅದು ಭಗವಂತನ ಆಶೀರ್ವಾದದಿಂದ ಮುಂದೊಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂದು ಶ್ರೀ ಕ್ಷೇತ್ರ ರ್ಕ ದೈವಜ್ಞ ಮಠದ ಶ್ರೀಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಚಾತುರ್ವಸ್ಯದ ಅಂಗವಾಗಿ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶನಿವಾರ ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳು ಸಣ್ಣವರಿರುವಾಗಲೇ ಉತ್ತಮ ಸಂಸ್ಕಾರ ನೀಡಿದರೆ, ಮುಂದೆ ಆ ಸಂಸ್ಕಾರದ ಸಂಸ್ಕೃತಿ ಕಾಣುತ್ತಿರಿ. ಕೆಲವೊಮ್ಮೆ ಜೀವನದಲ್ಲಿ ಏನೋ ನಡೆದು ಹೋಗುತ್ತದೆ, ಆದರೂ ಮೊದಲಿನ ಸಂಸ್ಕಾರದ ಬಲದಿಂದ ಮತ್ತೆ ಒಳ್ಳೆಯದೇ ಆಗುತ್ತದೆ.

ಸಣ್ಣ ವಯಸ್ಸಿನಲ್ಲಿ ಬಿತ್ತಿದ ಸಂಸ್ಕೃತಿಯ ಬೀಜ ಶಾಶ್ವತವಾಗಿ ಉತ್ತಮ ಫಲ ಕೊಡುತ್ತದೆ. ಪರಿವರ್ತನೆ ಆಗಬೇಕು ಎಂಬ ಚಿಂತನೆ ಮನದಲ್ಲಿ ಬರಬೇಕು. ಭಗವಂತನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನ ಮಾಡಬೇಕು, ಮೋಕ್ಷ ಸಾಧನೆಗೆ ಪ್ರಯತ್ನ ಬೇಕು. ಶ್ರೀಮಂತರಿದ್ದಾರೆ, ದೊಡ್ಡವರಿದ್ದಾರೆ, ಅವರು ಏನೂ ಬೇಕಾದರೂ ಮಾಡುತ್ತಾರೆ ಎಂದ ಮಾತ್ರಕ್ಕೆ ಅವರು ಆರೋಗ್ಯವಾಗಿದ್ದಾರೆ ಎಂದಲ್ಲ. ಶ್ರೀಮಂತರೂ ಸಹ ಮನಸ್ಸಿನ ತೃಪ್ತಿಗಾಗಿ, ಮನಸ್ಸಿನ ಶಾಂತಿಗಾಗಿ ಪರಿತಪಿಸುತ್ತಿರುತ್ತಾರೆ. ಹಾಗಾಗಿ ಹಣ, ಆಸ್ತಿ, ಅಂತಸ್ತು ಮಾತ್ರ ಜೀವನದ ಸಾಧನೆ ಅಲ್ಲ. ಅದು ಚನ್ನಾಗಿ ಇದ್ದೇನೆ ಎನ್ನುವ ತೋರಿಕೆಗೆ ಅಷ್ಟೇ. ಆತ್ಮ ತೃಪ್ತಿ ಜೀವನದಲ್ಲಿ ಅತ್ಯವಶ್ಯಕ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಆಗಬೇಕು, ಆದ್ಯಾತ್ಮಿಕ ಚಿಂತನೆ ಹೆಚ್ಚು ಬೇಕು ಎಂದರು.

ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net