

ನರಗುಂದ: ಕೇವಲ ಶಾಲೆ ಕಲಿತರೆ ಸಾಲದು. ಶಿಕ್ಷಣದಿಂದ ಗುರಿ ಸಾಧನೆ ಮುಖ್ಯ ಧ್ಯೇಯವಾಗಬೇಕು. ಸಾಮಾಜಿಕ ಚಿಂತನೆ ಅರಿತು ಮುಂದಿನ ಜೀವನವನ್ನು ಯಶಸ್ವಿಯಾಗಿ ದಡ ಸೇರಿಸುವ ಮೂಲಕ ಪ್ರತಿಯೊಬ್ಬರ ಬಾಳು ಹಸನಾಗಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ತಾಲೂಕಿನ ಕೊಣ್ಣೂರಿನ ಸ್ನೇಹಜೀವಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಸುಧಾರಣೆ ಬಹಳ ಶ್ರಮದಾಯಕ ಕೆಲಸವಾಗಿದೆ. ಮಕ್ಕಳ ಮನಸು ಗೆಲ್ಲುವಲ್ಲಿ ಶಿಕ್ಷಕರು ಸದಾ ಸೇವಾನಿರತರಾಗಿರಬೇಕು ಎಂದರು.
ಕೊಣ್ಣೂರ ಕ್ಲಸ್ಟರ್ ಮಟ್ಟದ ಸಂತೋಷ ತೂರನೂರ ಮಾತನಾಡಿದರು. ಅಶೋಕ ಪಾಟೀಲ, ಎಂ.ಬಿ. ಪಾಟೀಲ, ಬಿಆರ್ಸಿ ಅಧಿಕಾರಿ ಬಿ.ಎಫ್. ಮಜ್ಜಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎ.ಎಸ್. ಕುಂದರಗಿ, ಸಿ.ಎಂ. ಕೊಳ್ಳಿಯವರ, ಶಾಲಾ ಮುಖ್ಯಾಧ್ಯಾಪಕಿ ಮಾಲಾ ಪಾಟೀಲ, ಬಿ.ಎ. ಬೋಯಿಟೆ, ಸುಮಾ ಪಾಟೀಲ, ಸಂಸ್ಥೆ ಕಾರ್ಯದರ್ಶಿ ಶಂಕರಗೌಡ ಶಿರಿಯಪ್ಪಗೌಡ್ರ, ಸತೀಶ ಶಿವಪ್ಪಯ್ಯನಮಠ, ಬಸಮ್ಮ ಪಾಟೀಲ, ಬಸಮ್ಮ ತಳವಾರ, ಎಸ್.ಎಸ್. ಹಿರೇಮಠ, ಎಸ್.ಎಸ್. ಸಾಲಿಗೌಡ್ರ, ಎಂ.ಆರ್. ಡಂಬಳ, ಪ್ರದೀಪ ಎಂ.ಡಿ., ಫೈರೋಜ್, ಕೆ.ಪಿ. ಕಂಬಳಿ, ಮಹಾದೇವಿ ಹುಡೇದ, ಎಸ್.ಪಿ. ಹಡಪದ, ಇತರರಿದ್ದರು.