

ಮುನವಳ್ಳಿ: ಮಕ್ಕಳಲ್ಲಿ ಹುದಗಿರುವ ನತ್ಯಕಲಾ ಪ್ರತಿಭೆ ಅನಾವರಣಗೊಳಿಸಲು ಜೈಂಟ್ಸ್ ಗ್ರೂಪ್ ಪ್ರತಿವರ್ಷ ಸಮೂಹ ನತ್ಯ ಸ್ಪರ್ಧೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಸರ್ವಾಂಗೀಣ ಪ್ರಗತಿ ಹೊಂದಬೇಕು ಎಂದು ಸವದತ್ತಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು.
ಪಟ್ಟಣದ ಪಂಚಲಿಂಗೇಶ್ವರ ಸಭಾಂಗಣದಲ್ಲಿ ಸಮಾಜಸೇವಾ ಸಂಸ್ಥೆ ಜೈಂಟ್ಸ್ ಗ್ರೂಪ್ ಆ್ ಮುನವಳ್ಳಿ ಹಾಗೂ ರಾಣಿ ಚನ್ನಮ್ಮ ಸಹೇಲಿ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಶುಕ್ರವಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಮೂಹ ನತ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಉಮೇಶ ಬಾಳಿ ಮಾತನಾಡಿ, ಜೈಂಟ್ಸ್ ೌಂಡೇಶನ್ ಪ್ರತಿವರ್ಷ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಸಮಾಜಸೇವೆ ಮಾಡುತ್ತಿದೆ ಎಂದರು. ಗ್ರೂಪ್ ಅಧ್ಯಕ್ಷ ಭುಜಂಗರಾವ ನಿಕ್ಕಂ ಮಾತನಾಡಿದರು. ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ ಪಡೆದ ನಾಗರಾಜ ಕಮ್ಮಾರ, ಶಿಕ್ಷಕ ಎಂ.ಆರ್. ಬೇವಿನಗಿಡದ, ವಕೀಲ ಎಂ.ಎಸ್. ಸರ್ವಿ ಅವರನ್ನು ಸನ್ಮಾನಿಸಲಾಯಿತು. ನತ್ಯ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ೌಂಡೇಶನ್ ಅಧ್ಯಕ್ಷ ಲಗಮಣ್ಣ ದೊಡಮನಿ, ರಾಣಿ ಚನ್ನಮ್ಮ ಸಹೇಲಿ ಅಧ್ಯಕ್ಷೆ ರಾಧಾ ಕುಲಕರ್ಣಿ, ಅಶೋಕ ಪಟ್ಟಣಶೆಟ್ಟಿ, ಅನಿಲ ಕಿತ್ತೂರ, ರಮೇಶ ಗಂಗಣ್ಣವರ, ಸುಮಾ ರೇಣಕೆ, ಶಿವಾಜಿ ಮಾನೆ, ಸಂಜೀವಕುಮಾರ ತುಳಜಣ್ಣವರ, ಅಪ್ಪು ಅಮಠೆ, ಅನ್ನಪೂರ್ಣ ಲಂಬೂನವರ, ಮಹಾಂತೇಶ ಬೆಲ್ಲದ, ಬಸವರಾಜ ಅಂಗಡಿ, ವಿರಾಜ ಕೊಳಕಿ, ಎಂ.ಆರ್. ಓಂಕಾರಿ, ಶಿವಾನಂದ ಬಡೆಮ್ಮಿ, ಬಿ.ಬಿ.ಹುಲಿಗೊಪ್ಪ, ಬಾಳು ಹೊಸಮನಿ, ಬಿ.ಎಚ್.ಖೊಂದುನಾಯ್ಕ, ಶಿವಾನಂದ ರೇವಡಗಿ ಇತರರು ಇದ್ದರು.