ಸ್ವಾಮಿನಾಥನ ಆಯೋಗದ ವರದಿ ಜಾರಿಯಾಗಲಿ

24 SANDOOR 01
ಸಂಡೂರು ತಾಲೂಕು ಕುರೇಕುಪ್ಪದಲ್ಲಿ ರೈತ ದಿನಾಚರಣೆ ಆಚರಿಸಲಾಯಿತು. ಪ್ರಾಂತ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ವಿ.ದೇವಣ್ಣ, ರೈತ ಮುಖಂಡ ಯು.ರಾಮಣ್ಣ ಇತರರಿದ್ದರು.
Published on

ಸಂಡೂರು: ತಾಲೂಕಿನ ಕುರೇಕುಪ್ಪದಲ್ಲಿ ರೈತ ದಿನಾಚರಣೆ ಸೋಮವಾರ ಆಚರಿಸಲಾಯಿತು. ಪ್ರಾಂತ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ ಮಾತನಾಡಿ ಭತ್ತ, ಮೆಣಸಿನಕಾಯಿ, ಟೊಮ್ಯಾಟೊಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

ಆದರೆ ರಸ ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಷಕಗಳ ಬೆಲೆ ಮಾತ್ರ ಹೆಚ್ಚಾಗುತ್ತಿವೆ. ಅನ್ಯಾಯ ಸರಿಪಡಿಸುವಂತೆ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ.

ರೈತರ ಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾಮಿನಾಥನ ಆಯೋಗದ ವರದಿ ಜಾರಿ ಮಾಡಬೇಕು ಮತ್ತು ಬೆಳೆಗಳಿಗೆ ಎಂಎಸ್‌ಪಿ ಜಾರಿ ಮಾಡಬೇಕು.

ಬೆಳೆಗಳಿಗೆ ಕನಿಷ್ಠ ಬೆಲೆಯೂ ಸಿಗದೇ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು. ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ವಿ.ದೇವಣ್ಣ, ರೈತ ಮುಖಂಡರಾದ ಯು.ರಾಮಣ್ಣ, ದೇವಣ್ಣ, ಕೆ.ಬಸವರಾಜ, ಪಿ.ಸಿದ್ದೇಶ, ಎನ್.ಅಂಬರೀಶ, ತಾಯಪ,್ಪ ಹನುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net