ಸುತ್ತಲಿನ ಪರಿಸರ ಸ್ವಚ್ಛ, ಸುಂದರವಾಗಿರಲಿ

03 HKR 05 PARISARA
Published on

ಹಿರೇಕೆರೂರ: ಪರಿಸರ ಉತ್ತಮವಾಗಿದ್ದರೆ ಮಾತ್ರ ನಾವು ಆರೋಗ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ ಎಂದು ಸಿಪಿಐ ಬಸವರಾಜ ಹೇಳಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ನಗರದಲ್ಲಿರುವ ಬಿ.ಸಿ. ಪಾಟೀಲ ಉದ್ಯಾನದಲ್ಲಿ ಭಾನುವಾರ ಸಾರ್ವಜನಿಕರ ವಂತಿಕೆಯಿಂದ ಕಳೆನಾಶಕ ಔಷಧ ಸಿಂಪಡಣೆ ಮತ್ತು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪಟ್ಟಣ ಪಂಚಾಯಿತಿ ಇಲಾಖೆಯ ಉದ್ಯಾನಗಳನ್ನು ಬರಿ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿದರೆ ಸಾಲದು. ಅವರೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ನಮ್ಮ ಸುತ್ತಲಿನ ಪರಿಸರ ಸುಂದರ ಹಾಗೂ ಶುದ್ಧವಾಗಿರಲು ಸಾಧ್ಯ. ತನ್ಮೂಲಕ ಉತ್ತಮ ಗಾಳಿಯನ್ನು ಪಡೆದು, ಆರೋಗ್ಯದಿಂದ ಇರಬಹುದಾಗಿದೆ ಎಂದರು.

ಮುಖಂಡರಾದ ವಿ.ಬಿ. ಬಂಗೇರ, ಐ.ಬಿ. ಗುಬ್ಬಿ, ಬಸವರಾಜ ಅರಕೇರಿ, ಜಿ.ಎಸ್. ಮತ್ತೂರ, ಪಿ.ಬಿ. ಗುಬ್ಬಿ, ಪರಮೇಶ ಎಸ್.ಕೆ., ಎಚ್.ಟಿ. ಹಾದಿಮನಿ, ಹೊಳಿಯಪ್ಪ ಅಸುಂಡಿ, ಈರಣ್ಣ ಚಿಂದಿ, ಪಿ.ಎಚ್. ಪಾಟೀಲ, ಶ್ರೀಶೈಲ ಪುಟಾಣಿ, ತಿಮ್ಮೇಗೌಡ ಪ್ಯಾಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net