

ಶ್ರೀನಿವಾಸಪುರ: ತಾಲೂಕಿನ ಮಾವು ಬೆಳೆಗಾರರು ಕಳೆದ ನಾಲ್ಕೆದು ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಎಕರೆಗೆ 15 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆಗಾರರನ್ನು ಉಳಿಸಬೇಕು ಎಂದು ಶ್ರೀನಿವಾಸಪುರ ಮಾವು ಎಫ್ಪಿಸಿ ಕಾರ್ಯದರ್ಶಿ ವಿ.ರಮೇಶ್ಬಾಬು ಹೇಳಿದರು.
ಪಟ್ಟಣ ಹೊರವಲಯದ ಚಿಂತಾಮಣಿ ರಸ್ತೆಯ ್ಯಾಕ್ಟರಿ ಮುಂಭಾಗ ಮಂಗಳವಾರ ಮಾವು ಬೆಳೆಗಾರರು ಹಾಗೂ ಎಎಪಿ ಪಕ್ಷದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,
ಈ ಬಾರಿ ಮಾವಿಗೆ ಬೆಳೆಗೆ ಬೆಲೆಯಲ್ಲಿದೆ ಮಾನಸಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಸಕಾರ ಘೋಷಿಸಿರುವ ಬೆಂಬಲ ಬೆಲೆ ಏನೇನೂ ಸಾಲದು. ಈಗಾಗಲೇ ಶೇ.50 ರೈತರು ಕಟಾವು ಮಾಡಿದ್ದು, ಅವರಿಗೆ ಲಾಭವಿಲ್ಲ ಎಂದರು.
ತೋಟಗಾರಿಕೆ ಇಲಾಖೆಯ ಮತ್ತು ಕಂದಾಯ ಇಲಾಖೆ ತಾಲೂಕಿನ ಎಲ್ಲ ಮಾವಿನ ತೋಟಗಳಿಗೆ ತಕ್ಷಣ ಭೇಟಿ ನೀಡಿ ಜಂಟಿ ಕಾರ್ಯಾಚರಣೆಯಲ್ಲಿ ಬೆಳೆ ಸಮೀಕ್ಷಾ ನಡೆಸಿ, ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿದರೆ, ಎಲ್ಲ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಮಾತನಾಡಿ, ಕಳೆದ 25 ದಿನಗಳಿಂದ ಮಾವು ಬೆಳೆಗಾರರು ಮಾವಿಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ, ರಾಜ್ಯದಿಂದ 101 ಕೋಟಿ ಬೆಂಬಲ ಬೆಲೆಗೆ ಕೊಟ್ಟಿದ್ದೀವಿ ಎಂದು ಹೇಳುತ್ತಾರೆ. ಆದರ ಹಿಂದೆಯೇ ಬೇಕಾದಷ್ಟು ಷರತ್ತುಗಳನ್ನು ಸಹ ಹಾಕಿದರೆ. ಷರತ್ತುಗಳನ್ನು ಸಂಬಂಧಪಟ್ಟ ಇಲಾಖೆಯಲ್ಲಿ ಮಾಡಿಸಿಕೊಳ್ಳಲು 1 ವರ್ಷವೇ ಬೇಕಾಗಿದೆ. ಅಲ್ಲದೆ ಬೇಕಾಗಿರುವ ದಾಖಲೆಗಳನ್ನು ಮಾಡಿಸಿಕೊಳ್ಳಲು ಇಲಾಖಾಧಿಕರಿಗಳಿಗೆ ಲಂಚವನ್ನು ನೀಡಬೇಕು ಈ ಬೆಂಬಲ ಬೆಲೆಯ ಷರತ್ತುಗಳು ರೈತರಿಗೆ ಇದರಿಂದ ಅನುಕೂಲಕ್ಕಿನ್ನ ಅನಾನುಕೂಲ ಹೆಚ್ಚಾಗಿದೆ ಎಂದು ಟೀಕಿಸಿದರು.
ಮುಖಂಡರಾದ ಚಂದ್ರಶೇಖರರೆಡ್ಡಿ, ನಾಗದೇನಹಳ್ಳಿ ಚಂದ್ರ, ಅನಂತ್ ಆರ್ಗ್ಯಾನಿಕ್ಸ್ನ ಮಾಲೀಕ ನಗೂಳಿಗಾನಹಳ್ಳಿ ನಾಗರಾಜ್, ರಾಮೇಗೌಡ, ಪಾತೂರು ಮಂಜುನಾಥರೆಡ್ಡಿ, ವೇಣುಗೋಪಾಲ್, ಜೆ.ಚಲಪತಿ, ಚಂದ್ರಶೇಖರ್ ಇದ್ದರು.