ಸೂಕ್ತ ಅಭ್ಯರ್ಥಿ ಆಯ್ಕೆಯಾಗಲಿ

SWAMIJI
ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ
Published on

ಅರಸೀಕೆರೆ (ಗ್ರಾಮಾಂತರ): ದೇಶದ ಅಭಿವೃದ್ಧಿಗೆ ಮತದಾರರೇ ದಾರಿದೀಪವಾಗಿರುವುದರಿಂದ ಮತದಾನ ನಮ್ಮ ಹಕ್ಕು ಎಂಬುದನ್ನು ಅರಿತು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಕಣಕಟ್ಟೆ ಹೋಬಳಿಯ ದೊಡ್ಡಮೇಟಿಕುರ್ಕೆಯ ಶ್ರೀ ಬೂದಿಹಾಳ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಹೇಳಿದರು.

ಯಾವುದೇ ಉದ್ವೇಗ, ಆವೇಶ ಹಾಗೂ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಬೇಕು. ಇತ್ತೀಚಿನ ಚುನಾವಣೆಗಳಲ್ಲಿ ಯುವಕರ ಪಾತ್ರ ಅಮೂಲ್ಯವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಯುವ ಸಮೂಹ ಸೂಕ್ತ ಶಿಕ್ಷಣ ಪಡೆಯುವ ಮೂಲಕ ಪ್ರಬುದ್ಧರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯಕ ಎಂದು ವಿಜಯವಾಣಿಗೆ ತಿಳಿಸಿದರು.

ಮತಗಟ್ಟೆಗೆ ಬರುವ ಅಸಹಾಯಕರು ಮತ್ತು ವಯೋವೃದ್ಧರಿಗೆ ಸ್ವಯಂ ಪ್ರೇರಣೆಯಿಂದ ಸಹಾಯ ಮಾಡಿ ಮತ ಚಲಾಯಿಸಲು ಉತ್ತೇಜಿಸಬೇಕು. ಈ ಬಾರಿಯ ಲೋಕಸಭಾ ಚುನಾವಣೆ ಪ್ರಬುದ್ಧ ಮತದಾರರ ಮನಸ್ಥಿತಿ ಬಿಂಬಿಸುವ ಚುನಾವಣೆಯಾಗಿದೆ. ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಇತಿಹಾಸವನ್ನು ಬಿಂಬಿಸುವ ವಿವಿಧ ಕ್ಷೇತ್ರಗಳನ್ನು ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಪ್ರದರ್ಶಿಸುವ ಶಕ್ತಿ ಭಾರತಕ್ಕೆ ಇದ್ದು, ಪ್ರತಿಯೊಬ್ಬ ಭಾರತೀಯ ಪ್ರಜೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net