ಕಬ್ಬಿನ ಬಿಲ್ ​ಘೋಷಿಸಲಿ

3KAGWAD1
Published on

ಕಾಗವಾಡ: ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್​ ಕಬ್ಬಿಗೆ 3,750 ರೂ. ದರ ಘೋಷಣೆ ಮಾಡಬೇಕು. ಕಳೆದ ಹಂಗಾಮಿನಲ್ಲಿ ಪೂರೈಸಿದ ಪ್ರತಿ ಟನ್​ ಕಬ್ಬಿನ ಬಾಕಿ ಬಿಲ್​ 200 ರೂ. ಪಾವತಿಸಿ ಕಾರ್ಖಾನೆ ಪ್ರಾರಂಭಿಸಬೇಕೆಂದು ರೈತ ಮುಖಂಡ ಶೀತಲ ಪಾಟೀಲ ಆಗ್ರಹಿಸಿದರು.

ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಸ್ವಾಭಿಮಾನಿ ರೈತ ಸಂಟನೆ, ರಾಜ್ಯ ರೈತಸಂ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರು ಸೇರಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ತಹಸೀಲ್ದಾರ್​ ರವೀಂದ್ರ ಹಾದಿಮನಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಸುರೇಶ ಚೌಗಲೆ, ವಕೀಲ ರಾಹುಲ ಕಟಗೇರಿ, ಬಿ.ಜೆ.ಮೋಳೆ, ಡಾ.ಅಮೋಲ ಸರಡೆ ಮಾತನಾಡಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್​ ರವೀಂದ್ರ ಹಾದಿಮನಿ ಮಾತನಾಡಿ, ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು.

ಗ್ರೇಡ್​&2 ತಹಸೀಲ್ದಾರ್​ ರೇಷ್ಮಾ ಜಕಾತಿ, ನಿವೃತ್ತ ಶಿಕ ಎಂ.ಬಿ.ಉದಗಾಂವೆ, ಕಾಕಾ ಪಾಟೀಲ, ವಿನಾಯಕ ಚೌಗಲೆ, ಸಿದ್ದು ವಡೆಯರ, ರಾಜು ಪಾಟೀಲ, ಅಶೋಲ ಪಾಟೀಲ, ಕಾಕಾ ಚೌಗುಲೆ, ರಾಜು ಕರವ, ಸಚೀನ ಕವಟಗೆ, ಅಜಿತ ಕರವ, ಬಾಬಾಸಾಬ ಚೌಗುಲೆ, ಪೋಪಟ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net