

ಹೊಳೆನರಸೀಪುರ : ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಅವಧಿಯಲ್ಲಿ ಚೆನ್ನಾಗಿ ಓದಿ ಬದುಕನ್ನು ರೂಪಿಸಿಕೊಳ್ಳಿ ಎಂದು ಜೆಸಿ ಸಂಸ್ಥೆಯ ತರಬೇತುದಾರ ಎಚ್.ವಿ.ಸುರೇಶ್ ಕುಮಾರ್ ಸಲಹೆ ನೀಡಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ, ಕ್ರೀಡೆ, ಸಾಂಸ್ಕೃತಿಕ, ವಿವಿಧ ಘಟಕಗಳ ಉದ್ಘಾಟನೆ ಹಾಗೂ 2023-24 ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಗುರಿ ಉತ್ತಮ ಫಲಿತಾಂಶ ಪಡೆಯುವ ಕಡೆ ಇರಬೇಕು. ಶಿಕ್ಷಕರು ನಿಮಗೆ ಎಷ್ಟೇ ಉತ್ತಮವಾಗಿ ಪಾಠ ಮಾಡಿದರೂ ನೀವು ಸ್ವತಹ ಆಸಕ್ತಿಯಿಂದ ಓದದಿದ್ದರೆ ಉತ್ತಮ ಫಲಿತಾಂಶ ಸಾಧ್ಯ ಇಲ್ಲ. ಮಕ್ಕಳ ಬದುಕು ಸುಂದರವಾಗಿರಲಿ, ವಿದ್ಯಾವಂತರಾಗಿ ಮುಂದೆ ಚೆನ್ನಾಗಿ ಬಾಳಲಿ ಎನ್ನುವ ಉದ್ದೇಶದಿಂದ ಪಾಲಕರು ನಿಮ್ಮನ್ನು ಕಾಲೇಜಿಗೆ ಕಳುಹಿಸುತ್ತಾರೆ. ಅವರ ಶ್ರಮ ವ್ಯರ್ಥವಾಗದಿರಲಿ ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಎಚ್.ಎಸ್. ಪುಟ್ಟಸೋಮಪ್ಪ ಮಾತನಾಡಿದರು. ಉತ್ತಮ ಅಂಕ ಪಡೆದ ಕೀರ್ತನಾ, ರಕ್ಷಿತಾ, ಮಹಾಲಕ್ಷ್ಮೀ, ದಾಕ್ಷಾಯಿಣಿ ಅವರನ್ನು ಸನ್ಮಾನಿಸಿದರು.
ಶ್ರೀ ಗುರುಗಣೇಶ್ ಚಿಟ್ಸ್ ಸಂಸ್ಥೆಯ ಸುರೇಶ್ ಕುಮಾರ್, ಗೃಹ ವಿಜ್ಞಾನ ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ, ಉಪನ್ಯಾಸಕರಾದ ರವಿ, ರಾಜಶೇಖರ್, ಸುದರ್ಶನ್, ನಟರಾಜ್, ವಾಣಿ, ಮಮತಾ, ಶ್ರೀಲಕ್ಷ್ಮೀ, ರೇವತಿ, ತೇಜಸ್ವಿನಿ, ಪವಿತ್ರಾ, ನಿರ್ಮಲಾ, ಕಾಂತರಾಜು ಇತರರು ಇದ್ದರು.
ವಿದ್ಯಾರ್ಥಿನಿಯರಾದ ಎಂ.ತೇಜಸ್ವಿನಿ, ಎಂ.ಕೆ.ಬಿಂದು ಕಾರ್ಯಕ್ರಮ ನಿರೂಪಿಸಿದರು. ಅಮೂಲ್ಯಾ ಶುಭ ಕೋರಿದರು. ಡಿ.ಜಿ.ಐಶ್ವರ್ಯ ಸ್ವಾಗತಿಸಿದರು, ಕೆ.ಎಸ್. ಪಾವನಿ ವಂದಿಸಿದರು.