

ಹೊರ್ತಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿದರೆ ಯಶಸ್ಸು ಕಟ್ಟಿಬುಟ್ಟಿ ಎಂದು ರೇವಣಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಖೈನೂರ ಹೇಳಿದರು.
ಹೊರ್ತಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೇವಣಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ 57ನೇ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ನಿಗದಿಪಡಿಸಿಕೊಂಡು ಶಾಂತಚಿತ್ತದಿಂದ ಅಭ್ಯಸಿದರೆ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಸಾಧ್ಯ ಹೇಳಿದರು
ರೇವಣಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲಕ ಪಿ.ವಿ. ಮಾಳೋತ್ತರ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿದರು.
ನಿವೃತ್ತ ಉಪನ್ಯಾಸಕ ಎಸ್.ಎಸ್. ಪೂಜಾರಿ, ಜಿ.ಸಿ. ಪಾಟೀಲ, ಜೆ ವೈ. ತಾಳಿಕೋಟಿ, ಶಿವಪ್ಪ ಕಡಿಮನಿ, ಜೆ. ಎಸ್. ಪೂಜಾರಿ, ರೇವಣಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಮುಖ್ಯಶಿಕ್ಷಕ ಬಿ. ಅಂಕಲಗಿ, ಶಿವಾನಂದ ಮೇತ್ರಿ, ಎಸ್. ಎಂ. ಬಿರಾದಾರ, ಸುನೀಲ ಕ್ಷತ್ರಿ, ಶಿವಾನಂದ ಮೇತ್ರಿ ಎ.ಎಸ್. ತೇಲಿ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಪ್ರಮುಖರು ಮತ್ತು ಗ್ರಾಮಸ್ಥರು ಇದ್ದರು.