

ಬೈಲಹೊಂಗಲ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ ಹೇಳಿದರು.
ನಗರದಲ್ಲಿ ಶ್ರೀ.ಎ.ವಿ.ಢಮ್ಮಣಗಿ ಕಲ್ಪವೃಕ್ಷ ಮಾದರಿ ಶಾಲೆ ಹಾಗೂ ಉತ್ತರ ಕರ್ನಾಟಕ ವೇಣುಗ್ರಾಮ ಸಹೋದಯ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾತನಾಡಿ, ನಿಯಮಿತ ಕ್ರೀಡಾಭ್ಯಾಸ ರೂಢಿಸಿಕೊಳ್ಳಬೇಕು.
ಅವಕಾಶಗಳ ಸದುಪಯೋಗಪಡಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದರು.
ಉಪಪ್ರಾಚಾರ್ಯ ವಿಠ್ಠಲ ಹರಿಜನ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ಣಾಯಕ ಮಹಾಂತೇಶ ಶಿವನಾಯ್ಕರ, ಪ್ರಕಾಶ ಕಂಠಿ, ಶಾಲಾ ಕ್ರೀಡಾವಿಭಾಗದ ಪ್ರತಿನಿಧಿ ಅನ್ನಪೂರ್ಣಾ ಚೋಪಡೆ, ಗುಂಪು ಪ್ರತಿನಿಧಿಗಳಾದ ದಿಯಾ ಬಡ್ಲಿ, ಹರ್ಷಾ ಹಕ್ಕಿ, ಮನೀಷ ಪೇಟೆ, ಸೃಷ್ಟಿ ತುಳಜಣ್ಣವರ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ ವನಕಿ, ಬಸವರಾಜ ಕಾದ್ರೊಳ್ಳಿ, ವಿದ್ಯಾ ಬರಗಾಲಿ ಇತರರಿದ್ದರು. ಶಿಕ್ಷಕ ಆನಂದ ತಳವಾರ ನಿರೂಪಿಸಿದರು.