ವಿದ್ಯಾರ್ಥಿನಿಯರು ಹೆಚ್ಚೆಚ್ಚು ಸಸಿ ನೆಡಸಲಿ

Let the students plant more saplings.
Published on

ವಿಜಯಪುರ:ವಿದ್ಯಾರ್ಥಿನಿಯರು ಹೆಚ್ಚೆಚ್ಚು ಸಸಿಗಳನ್ನು ನಡೆಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕಿದೆ ಎಂದು ಸಹಾಯಕ ಉಪ ಸಂರಕ್ಷಣಾಧಿಕಾರಿ ಅನಂತಕುಮಾರ ಪಾಕಿ ಹೇಳಿದರು.ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಥಿ ಮಂಡಳಿ ಬೆಂಗಳೂರು (ಕೆಎಸ್​ಬಿಡಿಬಿ), ಜಿ.ಪಂ., ಸಾಮಾಜಿಕ ಅರಣ್ಯ ವಿಭಾಗ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಹೆಚ್ಚು ಸಸಿಗಳನ್ನು ನೆಡುವ ಮೂಲಕ ಹಸಿರು ಆವರಣವನ್ನು ವಿಸ್ತರಿಸಬೇಕು. ಪ್ರತಿ ವಿದ್ಯಾರ್ಥಿನಿಯೂ ಕನಿಷ್ಠ ಒಂದು ಗಿಡ ನೆಡಿಸುವ ಸಂಕಲ್ಪ ಕೈಗೊಂಡರೆ, ಭವಿಷ್ಯದ ಪೀಳಿಗೆಯಿಗಾಗಿ ಹಸಿರು, ಶುದ್ಧ ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಜೈವಿಕ ಇಂಧನವು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದ್ದು, ಇದು ಪರಿಸರ ಸಂರಕ್ಷಣೆಗೂ, ಶಾಶ್ವತ ಅಭಿವೃದ್ಧಿಗೂ ಮಹತ್ವದ ಪಾತ್ರ ವಹಿಸುತ್ತದೆ.

ಭಾರತ ದೇಶವು ಇಂಧನಗಳ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿದರೆ, ವಿದೇಶಿ ಇಂಧನ ಆಮದು ವೆಚ್ಚ ಕಡಿಮೆಯಾಗುತ್ತದೆ. ಅದರಿಂದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಮತ್ತು ಶಕ್ತಿಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಮಹಿಳಾ ವಿವಿಯ ಕಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿನಿಯರಿಗೆ ಜೈವಿಕ ಇಂಧನದ ಮಹತ್ವ ತಿಳಿಸಿದರು. ವಿವಿ ಆವರಣದಲ್ಲಿ ಸ್ನಾತಕ ವಿಭಾಗದ ವಿದ್ಯಾರ್ಥಿನಿಯರು ಜೈವಿಕ ಇಂಧನ ಸಂಬಂಧಿತ ಸಸಿಗಳನ್ನು ನೆಟ್ಟರು.

ಮಹಿಳಾ ಕೌಶಲ ತಂತ್ರಜ್ಞಾನ ಪಾರ್ಕ್​ ವಿಶೇಷಾಧಿಕಾರಿ ಅಶೋಕುಮಾರ ಸುರಪುರ, ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿ ಡಾ. ಸಕ್ಪಾಲ ಹೂವಣ್ಣ, ಡಾ. ಶ್ರೀನಿವಾಸ ಮತ್ತಿತರರಿದ್ದರು.ಕಾರ್ಯಕ್ರಮದ ಮುಖ್ಯ ಸಂಚಾಲಕ ಡಾ. ಬಾಬು ಆರ್​.ಎಲ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಒ ಡಾ. ಬಾಬು ಸಜ್ಜನ ವಂದಿಸಿದರು.

ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚಾರಣೆಯಲ್ಲಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿದರು. ಅನಂತಕುಮಾರ ಪಾಕಿ, ಅಶೋಕುಮಾರ ಸುರಪುರ, ಸಕ್ಪಾಲ ಹೂವಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net