

ವಿಜಯಪುರ: ಮಹಾತ್ಮ ಗಾಂಧೀಜಿ ಆತ್ಮಚರಿತ್ರೆ ಓದುವ ಮೂಲಕ ವಿದ್ಯಾರ್ಥಿಗಳು ಅವರ ತತ್ವಗಳನ್ನು ಅರಿಯಬೇಕು ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ. ಟಿ. ಹೇಳಿದರು.
ನಗರ ಹೊರವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಾಂಧೀಜಿ ಹೇಗೆ ಹುತಾತ್ಮರಾದರು ಹಾಗೂ ಅವರ ಆತ್ಮಚರಿತ್ರೆಯ ಮಹತ್ವ ಅರ್ಥೈಸಲು, ಅವರ ಜೀವನ ಅಧ್ಯಯನ ಮಾಡುವುದು ಅವಶ್ಯಕ. ಯುವಜನತೆ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿದ್ಯಾರ್ಥಿನಿಯರು ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಪಾಲಿಸಿ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಎನ್ಎಸ್ಎಸ್ ಟಕದ ಅಧಿಕಾರಿ ಪ್ರೊ. ವಿಷ್ಣು ಶಿಂಧೆ, ಡಾ. ಕಲಾವತಿ ಕಾಂಬಳೆ ಮತ್ತಿತರರಿದ್ದರು.
ಪ್ರೊ. ಅಶೋಕ್ಕುಮಾರ್ ಸುರಪುರ ಸ್ವಾಗತಿಸಿದರು. ಸಂತೋಷಿ ಮಾತಾ ನಿರೂಪಿಸಿದರು. ಡಾ. ಅಮರನಾಥ ಪ್ರಜಾಪತಿ ವಂದಿಸಿದರು.