ವಿದ್ಯಾರ್ಥಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲಿ

Let the students imbibe honesty
ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆ ಎಸ್‌ಸಿಪಿ ಕಲಾ ವಿಜ್ಞಾನ ಮತ್ತು ಡಿ.ಡಿ. ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಕೆ.ಎಂ. ಅವರಾದಿ, ಎಸ್.ಐ. ಕುಂದಗೋಳ, ಡಿ.ಬಿ. ಕೋಳಿ ಇತರರಿದ್ದರು.
Published on

ಮಹಾಲಿಂಗಪುರ: ಪ್ರತಿ ವ್ಯಕ್ತಿಯಲ್ಲಿ ತನ್ನದೇ ಆದ ವಿಶೇಷ ಜ್ಞಾನ ಮತ್ತು ಕಲೆ ಇದ್ದು, ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ. ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯ ಸಭಾಭವನದಲ್ಲಿ ಬುಧವಾರ 36ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಮಾಣಿಕತೆ, ಶ್ರದ್ಧೆ ಮೈಗೂಡಿಸಿಕೊಂಡು ಸಮಾಜವನ್ನು ಉನ್ನತೀಕರಣಗೊಳಿಸಲು ಶ್ರಮಿಸಬೇಕು ಎಂದರು. ಪ್ರಾಚಾರ್ಯ ಕೆ.ಎಂ. ಅವರಾದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರ‌್ಯಾಂಕ್ ಪಡೆದ ವಿದ್ಯಾರ್ಥಿಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕರನ್ನು ಸನ್ಮಾನಿಸಲಾಯಿತು.

ಐಕ್ಯೂಎಸಿ ಸಂಯೋಜಕಿ ಎಸ್.ಡಿ. ಸೊರಗಾಂವಿ, ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ. ಕುಂದಗೋಳ, ಪಿಯು ಕಾಲೇಜು ಪ್ರಾಚಾರ್ಯ ಡಿ.ಬಿ. ಕೋಳಿ, ಡಾ. ಅಶೋಕ ನರೋಡೆ, ಎಂ.ಎಂ. ನಿಂಬರಗಿ, ವಿ.ಎಸ್. ಅಂಗಡಿ, ಆರ್.ವಿ. ಚೌಗಲಾ, ಡಾ.ಎಸ್.ಸಿ. ಬಿಜ್ಜರಗಿ, ವಿ.ಎ. ಅಡಹಳ್ಳಿ, ಸಿ.ಎಸ್. ಐಗಳಿ, ಟಿ.ಡಿ. ಡಂಗಿ, ಅಬಯ ಉಗಾರೆ, ಆರ್.ಎಸ್. ಪೂಜಾರಿ, ಸಹನಾ ವಜ್ರಮಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net