ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಹೊಂದಲಿ

Let the students have a competitive spirit
ವಲಯಮಟ್ಟದ ಕ್ರೀಡಾಕೂಟದ ಥ್ರೋಬಾಲ್​ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೂವಿನಹಿಪ್ಪರಗಿ ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ಬಾಲಕಿಯರು. ಸುನೀಲ ನಾಯಕ, ಅಪ್ಪು ನಾಯಕ, ಎಸ್​.ಎಸ್​.ಅವಟಿ, ಜ್ಯೋತಿ ಗಣಾಚಾರಿ ಇತರರಿದ್ದರು.
Published on

ಹೂವಿನಹಿಪ್ಪರಗಿ: ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಆಟವಾಡಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೂ ಉದ್ಯೋಗ ಸೇರಿ ಎಲ್ಲ ೇತ್ರದಲ್ಲೂ ಸಾಕಷ್ಟು ಅವಕಾಶಗಳಿವೆ ಎಂದು ಬಸವನಬಾಗೇವಾಡಿ ೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಹೇಳಿದರು.
ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೂಂಡಿದ್ದ ಹೂವಿನಹಿಪ್ಪರಗಿ ಪ್ರೌಢ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

ಕ್ರೀಡೆಗಳು ಬಾಂಧವ್ಯ ಬೆಸೆಯುತ್ತವೆ. ಸೋಲು& ಗೆಲುವಿನ ಲೆಕ್ಕಾಚಾರ ಬಿಟ್ಟು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೂಳ್ಳಬೇಕು. ಮನಸ್ಸು ಶಾಂತ ರೀತಿಯಿಂದ ಇರಲು ಕ್ರೀಡೆ ಅವಶ್ಯವಾಗಿದೆ ಎಂದರು.

ಗ್ರಾಪಂ ಅಧ್ಯ ಅಪ್ಪು ನಾಯಕ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಎಸ್​.ಎಸ್​.ಅವಟಿ, ಮುಖ್ಯಗುರು ಸುಭಾಷ ಹರಿಜನ, ಎಸ್​.ವೈ.ಶಿವಯೋಗಿ, ಬಿ.ಪಿ.ಲಮಾಣಿ, ಎಸ್​.ಎಸ್​.ಗಬಸಾವಳಗಿ, ಎನ್​.ಜಿ.ಚಲವಾದಿ, ಸಿ.ಎಂ.ವಾಡೆಕರ, ಎಸ್​.ಬಿ.ಕಿಲಾರಟ್ಟಿ, ಚನ್ನಬಸಪ್ಪ ಬಾಗೇವಾಡಿ, ವಿ.ವಿ.ಚವ್ಹಾಣ, ಡಬ್ಲು.ಜಿ.ಮಿಠಾಯಿಗಾರ, ಜ್ಯೋತಿ ಗಣಾಚಾರಿ, ಎಸ್​.ಎ.ಗುಡ್ಡದ, ಎಸ್​.ಎಸ್​.ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net