

ಅಥಣಿ: ವಿದ್ಯೆ ಬದುಕಿನ ಆಧಾರ ಸ್ತಂಭವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬದುಕಿನಲ್ಲಿ ಪ್ರಾಮಾಣಿಕತೆ, ಶಿಸ್ತು, ಸಂಯಮ ರೂಢಿಸಿಕೊಂಡು ವಿದ್ಯಾವಂತರಾಗಿ ದೇಶ ಸೇವೆಗೆ ಮುಂದಾಗಬೇಕೆಂದು ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಪ್ರಮೋದ ಹಳಿಮನಿ ಹೇಳಿದರು.
ತಾಲೂಕಿನ ಶ್ರೀಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠದ ಮಹಿಳಾ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ, ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರ, ಪರಂಪರೆ ಮರೆಯಬಾರದು. ಮೊಬೈಲ್ ಬಳಕೆ ಕಡಿಮೆಗೊಳಿಸಿ ಓದಿನತ್ತ ಗಮನ ಹರಿಸಿದರೆ ಸಾಧನೆ ಸಾಧ್ಯ. ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ಸಾಗಿದರೆ ಪ್ರತಿಲ ಕಟ್ಟಿಟ್ಟಬುತ್ತಿ ಎಂದರು.
ಮಾಜಿ ಶಾಸಕ ಶಹಜಹಾನ ಡೊಂಗರಗಾವ ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿ, ದೇಶದ ಸಮೃದ್ಧಿ, ಐಕ್ಯತೆ ಕಾಪಾಡಲು ಶ್ರಮಿಸಬೇಕು ಎಂದರು. ನಿವೃತ್ತ ಶಿಕ್ಷಕ ಡಿ.ಎಸ್.ಕುಂಬಾರ,ಬಿ.ಸಿ.ಸರಿಕರ, ಹೊನವಾಡದ ಬಾಬುರಾವ ಮಹಾರಾಜರು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಗಂಗಾಧರ ಮಾತನಾಡಿದರು. ಬೈಲಹೊಂಗಲದ ಪಂಚಾಕ್ಷರಿ ಸ್ವಾಮೀಜಿ, ದರೂರದ ಬಸವ ದೇವರು, ಶ್ರೀಶೈಲ ಗುಂಡಗಿ, ಸೈದಪ್ಪ ಮಾದರ, ಸಿ.ಎಸ್.ರೂಢಗಿ, ಎಂ.ಎನ್.ವಾಲಿ, ಪರಗೌಡ ಪಾಟೀಲ, ಸುನಿತಾ ದೇವಮಾನೆ, ಎಂ.ಎಚ್.ಕೊಹಳ್ಳಿ, ದುಂಡಪ್ಪ ಪೂಜಾರಿ ಇತರರಿದ್ದರು.23-1ಎ
--------------------------