ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಲಿ

Karadigudda school
Published on

ಉಪ್ಪಿನಬೆಟಗೇರಿ: ವಿದ್ಯಾರ್ಥಿಗಳು ಅಭ್ಯಾಸದತ್ತ ಹೆಚ್ಚು ಗಮನ ಹರಿಸಿ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪ್ರಯತ್ನಿಸಬೇಕು ಎಂದು ಕರಡಿಗುಡ್ಡ ಗ್ರಾಮದ ಗ್ರಾಮ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಶಿವಪ್ಪ ಕುರಗುಂದ ಹೇಳಿದರು.

ಸಮೀಪದ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್​ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಭಯ ಪಡದೆ, ಕೊಟ್ಟಿರುವ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರ ಬರೆಯಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಮಾನಸಿಕ ಖಿನ್ನತೆಗೆ ಒಳಗಾಗದೆ ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು.

ಉಪ ಪ್ರಾಂಶುಪಾಲ ಉಮೇಶ ಕರ್ಚಕಟ್ಟಿ ಮಾತನಾಡಿ, ವರ್ಷವಿಡೀ ಓದಿದ ಪುಸ್ತಕಗಳಿಂದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರಲಿದ್ದು, ವೇಳಾ ಪಟ್ಟಿಗನುಗುಣವಾಗಿ ಮತ್ತೊಮ್ಮೆ ಪುಸ್ತಕಗಳನ್ನು ಓದಿಕೊಂಡರೆ ಉತ್ತರ ಬರೆಯುವ ಭಯ ಇರುವುದಿಲ್ಲ. ಜೀವನದಲ್ಲಿ ಗುರಿ ಸಾಧಿಸುವ ಛಲವಿದ್ದರೆ, ಇಂಥಹ ಪರೀಕ್ಷೆಗಳು ಸಾಮಾನ್ಯವಾಗಿದ್ದು, ಆತಂಕಪಡದೆ ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಬಸಲಿಂಗಪ್ಪ ಮಂಗಳಗಟ್ಟಿ, ಪ್ರಾಂಶುಪಾಲ ನಂದೀಶ ಕಾಖಂಡಕಿ, ಶಿವಶಂಕರ ಬಾಚಗುಂಡಿ, ಶೇಖರ ಮಂಗಳಗಟ್ಟಿ, ಹಸನ್​ನಾಯ್ಕ ನಾಯ್ಕರ, ಪಿ.ಎಸ್. ಅಂಕಲಿ, ಮಂಜುನಾಥ ಮುದಕಪ್ಪನವರ, ಪ್ರೇಮಾ ಯಲಿಗಾರ, ಎಸ್.ಪಿ. ಹೂಗಾರ, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net