ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳೆಸಿಕೊಳ್ಳಲಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಸಲಹೆ

Environment Day in Byadagi
Published on

ಬ್ಯಾಡಗಿ: ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಸಸಿಗಳನ್ನು ನೆಟ್ಟು ಬೆಳೆಸಿದರೆ, ಉತ್ತಮ ಪರಿಸರ ನಿರ್ವಿುಸಲು ಸಾಧ್ಯ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಬಿಇಎಸ್ ಶಿಕ್ಷಣ ಸಂಸ್ಥೆಯ ಎನ್​ಬಿಬಿ ಲಯನ್ಸ್ ಪ್ರೌಢಶಾಲೆ ಶಾಲೆ ಆವರಣದಲ್ಲಿ ಬುಧವಾರ ಪರಿಸರ ಸ್ನೇಹಿಬಳಗ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಧುನಿಕ ಬೆಳವಣಿಗೆಯಲ್ಲಿ ಅರಣ್ಯ ಸಂರಕ್ಷಣೆಗೆ ಹಿನ್ನೆಡೆಯಾಗಿ, ಎಲ್ಲೆಡೆ ಗಿಡಮರಗಳ ಅಳಿವು ಶುರುವಾಗಿದೆ. ದುರಾಸೆಯ ನೆಪದಲ್ಲಿ ಅರಣ್ಯ ಹಾಳು ಮಾಡುವ ಕುಕೃತ್ಯದಲ್ಲಿ ಮಾನವ ತೊಡಗಿದ್ದು, ಪರಿಸರ ಏರುಪೇರಾದಲ್ಲಿ ಎಲ್ಲರಿಗೂ ತೊಂದರೆ ಉಂಟಾಗಲಿದೆ ಎಂದರು.

ಬಿಇಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ಎಸ್.ಎನ್. ನಿಡಗುಂದಿ ಮಾತನಾಡಿ, ಮಾಲಿನ್ಯವನ್ನು ನಿಯಂತ್ರಿಸುವ ಮೂಲಕ ನಾವೆಲ್ಲರೂ ಪರಿಸರಸ್ನೇಹಿ ವಾತಾವರಣ ಸೃಷ್ಟಿಸಬೇಕಿದೆ. ಸರ್ಕಾರ ಪರಿಸರ ಕಾಪಾಡುವ ನಿಟ್ಟಿನಲ್ಲಿ ಕಠಿಣ ನಿಲುವು ತಾಳುವ ಮೂಲಕ ಬಿಗಿಯಾದ ಕಾಯ್ದೆಗಳನ್ನು ಜಾರಿಗೊಳಿಸಬೇಕಿದೆ ಎಂದರು.

ಮುಖ್ಯ ಶಿಕ್ಷಕ ಎಂ. ಉಮಾಪತಿ, ಪರಿಸರ ಸ್ನೇಹಿ ಬಳಗದ ಸದಸ್ಯರಾದ ಪ್ರವೀಣ ಮುಳಗುಂದ, ಮಹ್ಮದರಫೀ ಹಕೀಮ್ ಮೋಹನಕುಮಾರ ಹುಲ್ಲತ್ತಿ, ಶಿಕ್ಷಕಿಯರಾದ ಎನ್.ಎಂ. ದುರ್ಗದ, ಪಿ.ಎಸ್. ಯಲಿಮಾದಣ್ಣನವರ, ಜಿ. ಶ್ರೀದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net