

ಮುದ್ದೇಬಿಹಾಳ: ಬಾಲ್ಯದ ಗೆಳೆಯರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಾಗ ಮನಸ್ಸಿಗೆ ಖುಷಿ ಸಿಗುತ್ತದೆ ಎಂದು ಶಿವಾಚಾರ್ಯ ಮಹಾವಿದ್ಯಾಲಯದ ಅಧ್ಯಕ್ಷ ರವಿ ನಾಯಕ ಹೇಳಿದರು.
ಪಟ್ಟಣದ ತಂಗಡಗಿ ರಸ್ತೆ ಮಾರ್ಗದಲ್ಲಿರುವ ಶಿವಾಚಾರ್ಯ ಮಹಾವಿದ್ಯಾಲಯದಲ್ಲಿ 1985ನೇ ಸಾಲಿನ ನಮ್ಮೂರ ಗೆಳೆಯರ ಬಳಗದ 7ನೇ ವರ್ಷದ ವಾರ್ಷಿಕೋತ್ಸವ, ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮಗೆ ಕಲಿಸಿದ ಎಲ್ಲ ಗುರುಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದ ಇಂಥ ಕಾರ್ಯಕ್ರಮ ಆಯೋಜಿಸಿರುವ ಕಾರ್ಯ ಶ್ಲಾಘನೀಯವಾಗಿದೆ. ಹಿಂದಿನ ತರಗತಿಗಳಲ್ಲಿನ ಸಿಹಿ ಕಹಿ ಘಟನೆಗಳನ್ನು ನೆನಪಿಸಿಕೊಂಡು ಗುರುಗಳಿಗೆ ಆತ್ಮೀಯವಾಗಿ ಗುರುವಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ. ವಿದ್ಯಾರ್ಥಿಗಳು ಶಿಸ್ತು, ಪ್ರೀತಿ, ವಾತ್ಸಲ್ಯ, ಸಯಂ ಗುಣ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಅದು ಶಿಕ್ಷಕರಿಗೂ ತಂದ ಗೌರವ ಎಂದರು.
ಬಳಗದ ಸದಸ್ಯ ವೆಂಕಟೇಶ ಕೊರ್ತಿ ಮಾತನಾಡಿದರು.
ಡಾ. ಸಂಜಯ್ ಮಾಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೆಳೆಯರ ಬಳಗದ ಸದಸ್ಯರಾದ ಉಮೇಶ ವರದಪ್ಪನವರ, ಮುಕುಂದ ಕುಲಕರ್ಣಿ, ಡಾ. ಸಂಜಯ ಪಾಟೀಲ, ಶರಣು ದೇಗಿನಾಳ ತಮ್ಮ ಅನಿಸಿಕೆ ಹಂಚಿಕೊಂಡರು.
2025 ಗೆಳೆಯರ ಬಳಗದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಹುಮಾನ ನೀಡಲಾಯಿತು.
ರಾಜು ಓಸ್ವಾಲ್, ಇಕ್ವಾಲ್ ಮುದ್ದೇಬಿಹಾಳ, ಲೆಶಪ್ಪ ಪ್ಯಾಟಿಗೌಡ, ರವಿ ಪೂಜಾರಿ, ಬಸ್ಸು ಸಿದ್ದಾಪೂರ, ಎಂ.ಪಿ. ಉಪನಾಳ, ಜಗದೀಶ ಸೋಮನಕಟ್ಟಿ, ಡಾ. ಬಾಬು ಗುರಿಕಾರ, ಸಿದ್ದು ಮಾತಿನ, ಪ್ರಶಾಂತ ಜವಳಗಿ, ಮುನ್ನಪ ಮುರಾಳ, ಬಸವಂತ ದೇಶಪಾಂಡೆ ಇತರರಿದ್ದರು. ಗೆಳೆಯರ ಬಳಗದ ಸದಸ್ಯ ಬಾಳು ಗಿಂಡಿ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಕಲ್ಲುಂಡಿ ನಿರೂಪಿಸಿ, ಂದಿಸಿದರು.