ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಲಿ

8 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಸಂವೇದನಾಶೀಲತೆ ಹೊಂದಿ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಕವಯತ್ರಿ ಸವಿತಾ ನಾಗಭೂಷಣ ಹೇಳಿದರು.
ನಗರದ ಧಾರವಾಡ ಯೂನಿವಸಿರ್ಟಿ ಪಬ್ಲಿಕ್​ ಸ್ಕೂಲ್​ನ ಪ್ರಾರ್ಥನಾ ಮಂದಿರದಲ್ಲಿ ಡಾ. ಎಚ್​.ಎಫ ​.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಜನ ಮುಖಿ ಟ್ರಸ್ಟ್​ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ. ಎಚ್. ಎಂ. ಮಹೇಶ್ವರಯ್ಯ ಸ್ಮರಣೆಯಲ್ಲಿ ಸದಾಭಿರುಚಿ ಶಾಲಾ ಚಟುವಟಿಕೆಗಳ ಆರಂಭೋತ್ಸವ ಹಾಗೂ ರಾಜೇಶ್ವರಿ ಮಹೇಶ್ವರಯ್ಯ ಅವರ ಎದೆಯ ಹೊತ್ತಿಗೆ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಎ ಮುರಿಗೆಪ್ಪ ಮಾತನಾಡಿ, ಪ್ರೊ. ಎಚ್​.ಎಂ. ಮಹೇಶ್ವರಯ್ಯ ಪರಿಶ್ರಮ, ಪ್ರಯತ್ನದಿಂದಲೇ ಉನ್ನತವಾದದ್ದನ್ನು ಸಾಧಿಸಿದವರು ಎಂದರು.
ದತ್ತಿದಾನಿ ಡಾ. ರಾಜೇಶ್ವರಿ ಮಹೇಶ್ವರಯ್ಯ ಅವರು ತಮ್ಮ ದತ್ತಿ ನಿಧಿಯ ಉದ್ದೇಶ ಕುರಿತು ಮಾತನಾಡಿದರು. ಡಾ. ರಾಜೇಶ್ವರಿ ಮಹೇಶ್ವರಯ್ಯ ಅವರ ಎದೆಯ ಹೊತ್ತಗೆ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಪ್ರತಿಷ್ಠಾನದ ಎಸ್​.ಬಿ. ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಎ.ಬಿ. ನಾಯಕ್​, ಮೀನಾ ಹಿರೇಮಠ, ವಿ.ಎಚ್​. ಮುದುಕಂನವರ, ಉತ್ತರ ಕರ್ನಾಟಕ ಲೇಖಕಿಯರ ಸಂದ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net