ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ

13kudachi1
ಸುಟ್ಟಟ್ಟಿ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಬಿ. ಶಂಕರಾನಂದ ಕಾಲೇಜು ಪ್ರಾಚಾರ್ಯ ಎ.ಎಸ್. ಕಾಂಬಳೆ, ಶಿಬಿರಾಕಾರಿ ಆರ್.ಎಂ ಮಹೇಶವಾಡಗಿ ಇತರರನ್ನು ಸತ್ಕರಿಸಲಾಯಿತು. ಮುರಾರಿ ಬಾನೆ, ಡಾ. ಎಸ್.ಎ. ಬೆಳಗಲಿ, ವಾಮನ ಹಟ್ಟಿಮನಿ, ಅಜಿತ ಹೆಗಡೆ ಇತರರಿದ್ದರು.
Published on

ಕುಡಚಿ: ಉತ್ತಮ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕುಡಚಿ ಬಿ. ಶಂಕರಾನಂದ ಕಾಲೇಜಿನ ಪ್ರಾಚಾರ್ಯ ಎ.ಎಸ್. ಕಾಂಬಳೆ ಹೇಳಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಬಿ. ಶಂಕರಾನಂದ ಮಹಾವಿದ್ಯಾಲಯದ ವತಿಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸುಟ್ಟಟ್ಟಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ನನ್ನ ಭಾರತಕ್ಕಾಗಿ ಯುವಕರು 7 ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್‌ಎಸ್‌ಎಸ್ ಶಿಬಿರ ಶಿಬಿರಾರ್ಥಿಗಳಿಗೆ ಸೇವಾ ಮನೋಭಾವ ಕಲಿಸುತ್ತದೆ ಎಂದು ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಮುರಾರಿ ಬಾನೆ, ವಾಮನ ಹಟ್ಟಿಮನಿ, ಅಜಿತ ಹೆಗಡೆ, ಸಿದ್ದಪ್ಪ ಖಿಲಾರೆ, ಅನಿಲ ದೇಸಾಯಿ, ಗುರುನಾಥ ಖೋತ, ಸುಭಾಷ ಮಾನೆ, ಡಾ. ರಾಜು ಕಾಂಬಳೆ, ಶಿಬಿರಾಕಾರಿ ಪ್ರೊ.ಆರ್.ಎ. ಮಹೇಶವಾಡಗಿ, ಪ್ರಾಚಾರ್ಯ ಎ.ಎಸ್. ಕಾಂಬಳೆ, ವಿಠ್ಠಲ ಹಳಿಂಗಳಿ, ಜಡ್.ಆರ್. ಮುಲ್ಲಾ, ಲಕ್ಕಪ್ಪ ಪೂಜೇರಿ, ವಿಠ್ಠಲ ಹೆಗಡೆ, ಜಯಕರ ಸವದತ್ತಿ, ಶಿವಶಂಕರ ಪೂಜೇರಿ, ಕಲ್ಮೇಶ್ವರ ಬಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net