ವಿದ್ಯಾರ್ಥಿಗಳು ಪುಸ್ತಕ ಅಭಿರುಚಿ ಬೆಳೆಸಿಕೊಳ್ಳಲಿ

COLLEGE
ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆ ಕುರಿತು ಕಾರ್ಯಾಗಾರ ನಡೆಯಿತು. ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ, ಉಪನ್ಯಾಸಕರಾದ ನಾಗೇಂದ್ರಪ್ಪ, ಇಮಾಮಸಾಬ್, ರವಿಕುಮಾರ, ವಿಜಯಕುಮಾರ, ಬಸವರಾಜ ಇತರರು ಇದ್ದರು.
Published on

ಅಳವಂಡಿ: ಮೊಬೈಲ್‌ಗೀಳು ಯುವ ಜನಾಂಗವನ್ನು ಅಧ್ಯಯನದಿಂದ ವಿಮುಖರನ್ನಾಗಿ ಮಾಡುತ್ತದೆ ಎಂದು ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ತಿಳಿಸಿದರು.

ಗ್ರಾಮದ ಶ್ರೀಶಿವಮೂರ್ತಿಸ್ವಾಮಿ ಇನಾಮದಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಉದ್ಯೋಗ ಮಾಹಿತಿ ಕೋಶ, ಧಾರವಾಡದ ಚಾಣಕ್ಯ ಕರಿಯರ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಆಯೋಜಸಿದ್ದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ಕಾರ್ಯಾಗಾರ

ಅಗತ್ಯಕ್ಕೆ ತಕ್ಕ ಮೊಬೈಲ್ ಬಳಕೆ ತಪ್ಪಲ್ಲ ದಿನವಿಡಿ ಮೊಬೈಲ್‌ನಲ್ಲಿ ಮುಳುಗಿದರೆ ಪೈಪೋಟಿಯ ಜಗತ್ತಿನಲ್ಲಿ ಬದುಕು ಸಹ ಮುಳುಗುತ್ತದೆ. ಕಾರಣ ಯುವಕರು ಆಳವಾದ ಅಧ್ಯಯನ ನಡೆಸಿದರೆ ಸ್ಪರ್ಧೆಎದುರಿಸಲು ಸಾಧ್ಯವಾಗುತ್ತದೆ. ಉದ್ಯೋಗ ಪಡೆಯುವುದು ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಸುಲಭದ ಮಾತಲ್ಲ. ವಿದ್ಯಾರ್ಥಿಗಳು ಪುಸ್ತಕ ಅಭಿರುಚಿ ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ತಲೆ ಎತ್ತಿ ಓದಿದರೆ ಅವು ನಿಮ್ಮನ್ನು ತಲೆ ಎತ್ತಿ ತಿರುಗುವಂತೆ ಮಾಡುತ್ತವೆ. ಕಾರಣ ಅಧ್ಯಯನದತ್ತ ಒಲವು ತೋರಿ ಎಂದರು.

ಚಾಣಕ್ಯ ಕರಿಯರ ಅಕಾಡೆಮಿಯ ಬೋಧಕ ರವಿಕುಮಾರ ಮಾನಸಿಕ ಸಾಮರ್ಥ್ಯ ವಿಜ್ಞಾನ ಹಾಗೂ ಪ್ರಚಲಿತ ವಿಷಯಗಳ ಕುರಿತು ಮಾಹಿತಿ ನೀಡಿದರು.
ಉಪನ್ಯಾಸಕರಾದ ಮಲ್ಲೇಶ, ರವಿ ಬಡಿಗೇರ, ಬೋರಯ್ಯ, ವೀರಭದ್ರಪ್ಪ, ವೆಂಕಟೇಶ, ಪ್ರದೀಪ ಪಲ್ಲೇದ, ಸಿದ್ದಾಚಾರಿ, ಮಹೇಶ, ಗೌತಮಿ, ಹಸಿನಾಬಾನು, ಸಿಬ್ಬಂದಿ ವೀರಣ್ಣ ಪೂಜಾರ, ದುರ್ಗಪ್ಪ, ಹನುಮವ್ವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net