ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲಿ

15 HKR 01
Published on

ಹಿರೇಕೆರೂರ: ಆಧುನಿಕ ಯುಗದಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರ, ವಹಿವಾಟು ನಗದು ರಹಿತವಾಗಿ ಯಾವ ರೀತಿ ಹಣ ಚಲಾವಣೆ ಆಗುತ್ತದೆ ಎಂಬುದನ್ನು ಈ ಕಾರ್ಯಾಗಾರದ ಮೂಲಕ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದರು.

ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಪದವಿ ಕಾಲೇಜ್​ನಲ್ಲಿ ಶನಿವಾರ ಆಯೋಜಿಸಿದ್ದ ಫುಡ್​ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಮಾತನಾಡಿ, 2015ರಿಂದ ಇತ್ತೀಚೆಗೆ ಪ್ರತಿಯೊಬ್ಬ ನಾಗರಿಕರು ಹಾಗೂ ವ್ಯಾಪಾರಿಗಳು ನಗದು ರಹಿತ ವ್ಯವಹಾರವನ್ನು ಸುರಕ್ಷತೆಯಾಗಿ ವಿವಿಧ ಆಪ್​ಗಳ ಮೂಲಕ (ಪೋನ್ ಪೇ, ಗೂಗಲ್ ಪೇ, ಪೇಟಿಯಂ) ಸಕ್ರಿಯವಾಗಿ ಬಳಸಿಕೊಂಡು ಕ್ಷಣಮಾತ್ರದಲ್ಲಿ ಬೇರೆ ಪ್ರದೇಶದಲ್ಲಿರುವ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಬಹುದು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ. ಚನ್ನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸಿ.ಆರ್. ದೂದಿಹಳ್ಳಿ, ನಾಗರಾಜ ಎಚ್.ಪಿ., ಪಿ.ಎಂ. ವಿಜಯಕುಮಾರ, ಕಿರಣ ಬಾಗಲರ, ಕವಿತಾ ಅಣಜಿ, ಶೃಂಗಾ ಎನ್.ಕೆ., ಡಾ. ಪ್ರಿಯಾ ಇಂಡಿ ಹಾಗೂ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.

ಆರ್.ಎಫ್. ದೊಡ್ಡಮನಿ ಹಾಗೂ ಲಿಂಗರಾಜ ಹಲವಾಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net