ವಿದ್ಯಾರ್ಥಿಗಳು ಸಂಸ್ಕಾರ ಮೈಗೂಡಿಸಿಕೊಳ್ಳಲಿ

21 mlv 1 . 1 Another Angle
Published on


ಮಳವಳ್ಳಿ : ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯ ಜತೆಗೆ ನಮ್ಮ ಸಂಸ್ಕೃತಿಯ ಸಂಸ್ಕಾರವನ್ನು ಮೈಗೂಡಿಸಿಕೊಂಡು ತಾಯಿ ಮತ್ತು ತಾಯ್ನೆಲದ ಋಣವನ್ನು ತೀರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.


ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾಲಕರ ಸಭೆ ಹಾಗೂ ಮಾತೃವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಶಿಕ್ಷಕರು ಬೋಧಿಸುವ ಪಠ್ಯಕ್ರಮಗಳನ್ನು ಆಸಕ್ತಿಯಿಂದ ಪಠಣ ಮಾಡಿಕೊಳ್ಳಬೇಕು. ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಸ್ಕಾರಯುತ ನಡೆ, ನುಡಿಗಳನ್ನು ಅನುಸರಿಸುವುದರಿಂದ ಭವಿಷ್ಯದ ಬದುಕು ಸುಂದರವಾಗಿರಲಿದೆ ಎಂದು ಸಲಹೆ ನೀಡಿದರು.


ಮುಖ್ಯ ಶಿಕ್ಷಕ ನಾಗೇಂದ್ರಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಲು ಶಿಕ್ಷಕರಿಗಿಂತ ತಾಂಯಂದಿರ ಪಾತ್ರ ಪ್ರಾಮುಖ್ಯತೆ ಪಡೆಯಲಿದೆ. ಮನೆಯಲ್ಲಿ ಮಕ್ಕಳು ಓದುವ ಸಮಯದಲ್ಲಿ ತಾವುಗಳು ಟಿವಿ ಮೊರೆ ಹೋಗದೆ ಅವರ ಕಲಿಕೆಗೆ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.


ಬೇಸಾಯ ತಜ್ಞ ಪಾಂಡುರಂಗ ಜೋಶಿ ಮಾತನಾಡಿ, ಮಾತೃವಂದನಾ ಎಂಬ ಪದಬಳಕೆಯಿಂದ ನಡೆಸುವ ಕಾರ್ಯಕ್ರಮ ಅತ್ಯಂತ ಶ್ರೇಷ್ಠವಾಗಿದ್ದು, ಇದು ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಧೋತಕವಾಗಿದೆ ಎಂದು ಶ್ಲಾಘಿಸಿದರು.


ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ವಹಿಸಿದ್ದರು. ಸದಸ್ಯರಾದ ಮೀನಾ ಸಂಜಯ್, ಸುಮಾ, ಶಿಕ್ಷಕರಾದ ಮನುಜಾ, ಮಮತಾ, ಸುನಂದಾ, ಜಯಮ್ಮ, ಗುಂಡಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net