ವಿದ್ಯಾರ್ಥಿಗಳು ಆದರ್ಶ ರೂಢಿಸಿಕೊಳ್ಳಲಿ

16MUDALGI1
Published on

ಮೂಡಲಗಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಹೇಳಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಲೋಕಾಯುಕ್ತ ಲೋಕಪಾಲ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಕ್ರಮಗಳು ಹಾಗೂ ಲೋಕಪಾಲ ಮತ್ತು ಲೋಕಾಯುಕ್ತ ಕ್ರಮಗಳ ಜಾಗೃತಿ ಅರಿವು ಸಪ್ತಾಹ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ ಕಾರ್ಯದರ್ಶಿ ಡಾ.ಭೋಜರಾಜ ಬೆಳಕೂಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರ, ಅನ್ಯಾಯ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸಂಸ್ಥೆ ಅಧ್ಯಕ್ಷ ರಮೇಶ ಬೆಳಕೂಡ, ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ ಮಾತನಾಡಿದರು. ಲೋಕಾಯುಕ್ತ ಪೊಲೀಸ್ ಉಪ ಅಧಿಕ್ಷಕ ಬಿ.ಎಸ್.ಪಾಟೀಲ, ಭ್ರಷ್ಟಾಚಾರ ತಡೆ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ಲೋಕಾಯುಕ್ತ ಮಹಿಳಾ ಪೊಲೀಸ್ ಉಪ ಅಧೀಕ್ಷಕಿ ಪುಷ್ಪಲತಾ ಎನ್., ಜಿಲ್ಲಾ ಎನ್‌ಎಸ್‌ಎಸ್ ಪ್ರಭಾರ ಸಂಯೋಜನಾಧಿಕಾರಿ ಪ್ರೊ.ಪ್ರಕಾಶ ಕುರೂಪಿ, ಬಿಇಒ ಬಿ.ಬಿ.ಹಿರೇಮಠ, ಪಪಂ ಮುಖ್ಯಾಧಿಕಾರಿ ಸಿ.ಎಂ.ಮುಗಳಖೋಡ ಇತರರಿದ್ದರು. ಪ್ರಾಚಾರ್ಯ ಡಾ.ಎಸ್.ಎಸ್.ಹೂಗಾರ ಸ್ವಾಗತಿಸಿದರು. ಪ್ರೋ.ಉಮಾ ನೀಲನ್ನವರ, ಮುಖ್ಯಶಿಕ್ಷಕಿ ರಮೀಜಾ ಅಣ್ಣಿಗೇರಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net