

ಯಕ್ಕುಂಡಿ: ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ನಿರಂತರ ಅಧ್ಯಯನದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಉಪ ಪ್ರಾಚಾರ್ಯ ವಿಜಯ ಪೂಜೇರ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.ಬಸವರಾಜ ಹೊಂಗಲ, ಬಸನಗೌಡ ಪಾಟೀಲ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಗೆ ಆದರ್ಶ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದ ರಮೇಶ ಗಾಣಿಗೇರ, ಆರ್.ವಿ.ಗಣಾಚಾರಿ, ಹೇಮಂತಕುಮಾರ ಮಾತನಾಡಿದರು. ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖಂಡರಾದ ಶಂಕರಗೌಡ ಪಾಟೀಲ, ಅಬ್ದುಲ್‌ಖಾದರಜೈಲಾನಿ ಬಾರಿಗಿಡದ, ಮುಕ್ತಾರ್‌ಹ್ಮದ ಮುಲ್ಲಾ, ರಾಜೇಸಾಬ ಪರಸಪ್ಪನವರ, ನಿಂಗರಾಜ ಪಾಟೀಲ, ಚನ್ನಪ್ಪ ಹೊಂಗಲ, ಸಕಲೀನ್ ನದಾಫ್, ತಾಲೀಬ್ ಮುಜಾವರ, ಮಲ್ಲಿಕಾರ್ಜುನ ಪಾಶ್ಚಾಪುರ, ಇಸ್ಮಾಯಿಲ್ ಪರಸಪ್ಪನವರ, ದಾದಾ ಬಾರಿಗಿಡದ, ಹುಸೇನ ನದಾಫ್ ಇತರರಿದ್ದರು. ಎಸ್.ಜಿ.ಕ್ಯಾಮನ್ನವರ ವರದಿ ವಾಚಿಸಿದರು. ಎಸ್.ಎಸ್.ಹುಡೇದ ಸ್ವಾಗತಿಸಿದರು, ಮಂಜುಳಾ ತೇಗೂರ ನಿರೂಪಿಸಿದರು. ರಿಹಾನಾ ಬೆಳವಡಿ ವಂದಿಸಿದರು.