ಹೋರಾಟ ಇಸ್ರೇಲ್​ ಮಾದರಿಯಲ್ಲಿರಲಿ

7 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವವನ್ನೇ ಶಕ್ತಿ, ಸಾಮರ್ಥ್ಯದಿಂದ ಚಕಿತಗೊಳಿಸುವ ಇಸ್ರೇಲ್​ ದೇಶದ ಬಗ್ಗೆ ಅಧ್ಯಯನ ಮಾಡಬೇಕು. ಹೊರಗಿನ ಮತ್ತು ಆಂತರಿಕ ಶತ್ರುಗಳ ವಿರುದ್ಧ ನಾವೂ ಇಸ್ರೇಲ್​ ಮಾದರಿಯಲ್ಲಿ ಹೋರಾಟಲು ಸಿದ್ಧರಾಗಬೇಕು ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್​ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶತ್ರು ಯಾರು? ಮಿತ್ರ ಯಾರು? ಎಂಬುದನ್ನು ನಾವು ಅರಿಯಬೇಕು. ಈ ನಿಟ್ಟಿನಲ್ಲಿ ಇಸ್ರೇಲ್​ ದೇಶವನ್ನು ಸದಾ ಸ್ಮರಿಸಿಕೊಳ್ಳಲೇಬೇಕು. ಕೇವಲ ಒಂದು ಕೋಟಿ ಜನಸಂಖ್ಯೆಯ ಪುಟ್ಟ ಇಸ್ರೇಲ್​ ದೇಶವು ತನ್ನ ಶಕ್ತಿ ಸಾಮರ್ಥ್ಯದಿಂದ ಇಡೀ ಜಗತ್ತನ್ನೇ ನಡುಗಿಸುತ್ತಿದೆ. ಹೀಗಾಗಿ ಇದರ ಮಾದರಿಯಲ್ಲೇ ನಾವು ಸಿದ್ದರಾಗಬೇಕು ಎಂದು ಸಲಹೆ ನೀಡದರು.
ನಮ್ಮಲ್ಲಿ ಭಕ್ತಿ ಇದೆ. ಆದರೆ ಶಕ್ತಿ ಇಲ್ಲ. ಹೀಗಾಗಿ ದುರ್ಗಾಮಾತೆ ನಮಗೆ ಶಕ್ತಿ ನೀಡಲಿ. ಸನಾತನ ಹಿಂದೂ ಧರ್ಮಕ್ಕೆ ದೊಡ್ಡ ಪ್ರಮಾಣದಲ್ಲಿ ಅಪಾಯ ಎದುರಾಗಿದ್ದು, ಅದನ್ನು ಎದುರಿಸಿ ಧರ್ಮ ಉಳಿಸುವ ಕಾರ್ಯ ಆಗಬೇಕಿದೆ. ಈ ಕಾರ್ಯಕ್ಕೆ ದುರ್ಗಾ ಮಾತೆ ಶಕ್ತಿ ನೀಡುವಂತೆ ಪ್ರಾರ್ಥಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net