ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಳ್ಳಲಿ

22ATHANIGRAMIN3
Published on

ಅಥಣಿ ಗ್ರಾಮೀಣ: ಮಹಾತ್ಮರ ಪ್ರವಚನ ಆಲಿಸುವುದರ ಮೂಲಕ ಬದುಕಿನಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಇಂಚಲದ ಸದ್ಗುರು ಶಿವಾನಂದ ಭಾರತಿ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಅಥಣಿ ತಾಲೂಕಿನ ನಾಗನೂರ ಪಿ.ಕೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿರುವ 47ನೇ ವೇದಾಂತ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಾನವ ಜನ್ಮ ಶಾಶ್ವತವಲ್ಲ. ಆದರೆ, ಜೀವ ಸಂಕುಲದಲ್ಲಿ ಮಾನವ ಜನ್ಮಕ್ಕೆ ಶ್ರೇಷ್ಠ ಸ್ಥಾನವಿದೆ. ದುಡಿಮೆಯಲ್ಲಿ ಸಾಧ್ಯವಾದಷ್ಟು ದಾನ, ಧರ್ಮ ಮಾಡಿ ಸಮೃದ್ಧ ಬದುಕು ಸಾಗಿಸಬೇಕು ಎಂದು ತಿಳಿಸಿದರು.

ವಿಜಯಪುರ ಷಣ್ಮುಖಾರೂಢಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಅಹಂಕಾರದಿಂದ ವ್ಯಕ್ತಿ ದುಃಖಿತನಾಗುತ್ತಾನೆ. ಇದನ್ನು ಹೋಗಲಾಡಿಸಲು ಗುರುವಿನ ಉಪಕಾರ ಸ್ಮರಣೆ ಅಗತ್ಯ ಎಂದರು.

ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಜಡಿಸಿದ್ಧ ಯೋಗಿಂದ್ರಮಠದ ರಾಮಾನಂದ ಭಾರತಿ ಸ್ವಾಮೀಜಿ, ಹುಣಶ್ಯಾಳದ ನಿಜಗುಣ ದೇವರು, ಕೌಲಗುಡ್ಡದ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.

ತುಂಗಳ ಕೈವಲ್ಯಾಶ್ರಮದ ಅನುಸೂಯಾ ತಾಯಿ, ಹುಬ್ಬಳ್ಳಿ ಸಿದ್ಧಾರೂಢಮಠದ ಸಚ್ಚಿದಾನಂದ ಸ್ವಾಮೀಜಿ, ಬೈಲಹೊಂಗಲದ ನಿಂಗಯ್ಯ ಸ್ವಾಮೀಜಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಗಂಗಪ್ಪ ಬಿಳ್ಳೂರ, ಅಪ್ಪಾಸಾಹೇಬ ಸಾವಡಕರ, ರಮೇಶ ಸವದಿ, ಶೇಖರಗೌಡ ಪಾಟೀಲ, ಚನ್ನಪ್ಪ ಹಂಚಿನಾಳ, ಲಕ್ಷ್ಮಣ ಬೆಳ್ಳಂಕಿ, ಶಂಕರ ಸವದಿ ಇತರರಿದ್ದರು. ಬಸವರಾಜ ತೇಲಿ ನಿರೂಪಿಸಿದರು. ಮಹೇಶ ಮಠಪತಿ ಸ್ವಾಗತಿಸಿದರು. ಸಂಗಪ್ಪ ಅಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net