

ಧಾರವಾಡ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಜಯಗಳಿಸಿದ ಯೋಧರ ಗೌರವಾರ್ಥ ತಾಲೂಕಿನ ನಿಗದಿ ಗ್ರಾಮದಲ್ಲಿ ಶನಿವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಗ್ರಾಮದಲ್ಲಿನ ಹುತಾತ್ಮ ಯೋಧ ಮಹಾದೇವ ಶಿಗನಳ್ಳಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ವಕೀಲ ಕರಿಯಪ್ಪ ಅಮ್ಮಿನಭಾವಿ ಮಾತನಾಡಿ, 1999ರ ಜುಲೈ 26ರಂದು ಪಾಕಿಸ್ತಾನದ ವಿರುದ್ಧ ಭಾರತೀಯ ವೀರ ಯೋಧರು ಕಾರ್ಗಿಲ್ ಯುದ್ಧದಲ್ಲಿ ಜಯಗಳಿಸಿದ್ದು ಹೆಮ್ಮೆ ಪಡೆಬೇಕಾದ ಸಂಗತಿ. ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಯೋಧರನ್ನು ಗೌರವದಿಂದ ಕಾಣಬೇಕು. ಅವರ ಸೇವೆಯು ನಮಗೆಲ್ಲ ಮಾದರಿಯಾಗಬೇಕು. ಈ ದಿಸೆಯಲ್ಲಿ ಎಲ್ಲ ಪಾಲಕರು ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಉದಾತ್ತ ಗುರಿ ಹೊಂದಬೇಕು ಎಂದರು.
ಹುತಾತ್ಮ ಯೋಧ ಮಹಾದೇವ ಶಿಗನಳ್ಳಿ ಅವರ ತಂದೆ ಚನ್ನಬಸಪ್ಪ ಮತ್ತು ತಾಯಿ ಪಾರವ್ವ ಹಾಗೂ ಸೈನಿಕರಾದ ಅಶ್ವಿನ ಕುಂದರಗಿ, ಬಸವರಾಜ ಟವಳಿ, ನಿಂಗಪ್ಪ ಹಳಿಯಾಳ, ಪ್ರವೀಣ ಮಗದುಮ, ಬಸವರಾಜ ಸುಣಗಾರ, ಪರಮೇಶ್ವರ ಮುಗದ, ಮಂಜುನಾಥ ಹಾಲಿಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯಲ್ಲಪ್ಪ ಹುಲೆಪ್ಪನವರ, ಬಸವರಾಜ ಗುಂಡಗೋವಿ, ಶಿವಾಜಿ ಡೊಳ್ಳಿನ, ಕಲ್ಮೇಶ ಬೇಲೂರ, ಚನ್ನಪ್ಪ ಜಗದಪ್ಪನವರ, ಶಿವಾನಂದ ಗುಂಡಗೋವಿ, ರಾಯನಗೌಡ ಪಾಟೀಲ, ಶಿವಯ್ಯ ಬೆಳ್ಳಕ್ಕಿಮಠ, ಕಲ್ಲಪ್ಪ ಹಳಿಯಾಳ ಇತರರಿದ್ದರು.