

ಕಾಗವಾಡ: ಪತ್ರಕರ್ತರು ನೈಜ ವರದಿ ಮಾಡುವ ಮೂಲಕ ಸಮಾಜದ ಸ್ವಾಸ್ಥೃಹಾಳಾಗದಂತೆ ನೋಡಿಕೊಳ್ಳಬೇಕು. ಓದುಗರ ವಿಶ್ವಾಸಕ್ಕೆ ಧಕ್ಕೆ ಆಗದಂತೆ
ನಡೆದುಕೊಳ್ಳಬೇಕು ಎಂದು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಸಂಚಾಲಕ ಸುಕುಮಾರ ಬನ್ನೂರೆ ಮಾತನಾಡಿದರು. ತಹಸೀಲ್ದಾರ್ ರಾಜೇಶ ಬುರ್ಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ವಾಲಿ, ಪಿಎಸ್‌ಐ ಎಂ.ಬಿ. ಬಿರಾದರ, ಜ್ಯೋತಿಕುಮಾರ ಪಾಟೀಲ, ಅಭಯ ಅಕಿವಾಡೆ, ಭಮ್ಮಣ್ಣ ಚೌಗುಲೆ, ಸಂಜಯ ತಳವಲಕರ, ದೀಪಕ ಪಾಟೀಲ, ನಾಥಗೌಡ ಪಾಟೀಲ, ವಿನೋದ ಕೋಳೆಕರ, ಉಮೇಶ ಪಾಟೀಲ ಇತರರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಮಹಾಂತೇಶ ಅರಕೇರಿ ಸ್ವಾಗತಿಸಿದರು. ಶಿಕ್ಷಕ ಕುಮಾರ ಗಾಣಿಗೇರ ನಿರೂಪಿಸಿದರು. ಶಿಕ್ಷಕ ಶಿವಗೌಡ ಚೌಗುಲೆ ವಂದಿಸಿದರು.