ಸಮಾಜ ಸುಧಾರಣೆಗೆ ಮುಂದಾಗಲಿ

26Rotary
ರೋಟರಿ ಕ್ಲಬ್ ಉತ್ತರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವಿನಾಶ ಪೋತದಾರ ಮಾತನಾಡಿದರು. ಅರುಣ ಶಿರಗಾಪುರ, ಪಾಂಡುರಂಗ ದೋತ್ರೆ, ದುರ್ಗೇಶ್ ಹರಿತೆ, ಪುಷ್ಪಾ ಪರ್ವತರಾವ ಇದ್ದರು.
Published on

ಬೆಳಗಾವಿ: ರೋಟರಿ ಕ್ಲಬ್ ಆ್ ಬೆಳಗಾವಿ ಉತ್ತರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಈಚೆಗೆ ಜರುಗಿತು.
ನಗರದ ಕ್ಯಾಂಪ್ ಪ್ರದೇಶದ ಮ್ಯಾಸೋನಿಕ್ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆ್ ಬೆಳಗಾವಿ ಉತ್ತರ ಘಟಕ ಅಧ್ಯಕ್ಷರಾಗಿ ಅರುಣ ಶಿರಗಾಪುರ, ಕಾರ್ಯದರ್ಶಿಯಾಗಿ ಪಾಂಡುರಂಗ ಧೋತ್ರೆ, ಖಜಾಂಚಿಯಾಗಿ ದುರ್ಗೇಶ್ ಹರಿತೆ ಅಧಿಕಾರ ಸ್ವೀಕರಿಸಿದರು.
ರೋಟರಿಯನ್ ಅವಿನಾಶ್ ಪೋತದಾರ ಮಾತನಾಡಿ, ರೋಟರಿ ಕ್ಲಬ್ ಪ್ರತಿ ಸದಸ್ಯರು ಸಮಾಜ ಸುಧಾರಣೆಗೆ ಮುಂದಾಗಬೇಕು. ರೋಟರಿ ಕ್ಲಬ್ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಸದಸ್ಯರನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು. ಜಿತೇಂದ್ರ ಬಾಮನೆ, ವಿಕಾಸ ಗಾಡವಿ, ಅಜೀತಕುಮಾರ ಅಲಸೋಡೆ, ಮಹಾಂತೇಶ ಪುರಾಣಿಕ, ಬಿ.ಜಿ.ಧರೆಣ್ಣಿ, ಪುಷ್ಪಾ ಪರ್ವತರಾವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net