

ಶಿರಹಟ್ಟಿ: ಮಕ್ಕಳ ವಿವರಗಳನ್ನು ನಿಖರವಾಗಿ ಸರ್ಕಾರಕ್ಕೆ ನೀಡುವ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿದ ಸ್ಮಾರ್ಟ್ ಫೋನಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರದಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು.
ಪೋಷಣ ಅಭಿಯಾನ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮೃತ್ಯುಂಜಯ ಗುಡ್ಡದಾನ್ವೇರಿ ಮಾತನಾಡಿ, ತಾಲೂಕಿನಲ್ಲಿ 235 ಅಂಗವಾಡಿ ಕಾರ್ಯಕರ್ತೆಯರು ಹಾಗೂ 9 ಮೇಲ್ವಿಚಾರಕಿಯರು ಸೇರಿ ಒಟ್ಟು 262 ಸ್ಮಾರ್ಟ್ ಪೋನ್ ವಿತರಣೆ ಮಾಡಲಾಗಿದೆ. ಸರ್ಕಾರದ ಮಾನದಂಡದಂತೆ ಸ್ನೇಹಾ ಆಪ್ ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ, ಹಾಜರಾತಿ, ತೂಕ, ಪೌಷ್ಟಿಕ ಆಹಾರ ಇತ್ಯಾದಿ ಕ್ರಮಗಳನ್ನು ಸಂಗ್ರಹಿಸಿ ಸಮರ್ಪಕ ಮಾಹಿತಿ ಇಲಾಖೆಗೆ ನೀಡಿದಾಗ ಸರ್ಕಾರ ಸ್ಮಾರ್ಟ್ಪೋನ್ ನೀಡಿದ್ದು ಸಾರ್ಥಕವಾಗುತ್ತದೆ ಎಂದರು.
ನಾಗರಾಜ ಲಕ್ಕುಂಡಿ, ಅಕ್ಬರಸಾಬ್ ಯಾದಗೀರ, ರಾಮು ಕಂಬಳಿ, ಅಶೋಕ ವರವಿ, ಯಲ್ಲನಗೌಡ ಪಾಟೀಲ, ಶಿವಾನಂದ ಹೊಸಳ್ಳಿ, ಆನಂದ ಕೊಡ್ಲಿ, ಪಾರವ್ವ ಪಾಟೀಲ, ನಂದಾ ನವಲೆ, ಗಿರಿಜವ್ವ ಪಾಟೀಲ, ರೇಣುಕಾ ಹುಲ್ಲೂರ, ಗೀತಾ ಮುಳಗುಂದ, ಶಿಲ್ಪಾ ಹೊಸಮನಿ, ಇತರರಿದ್ದರು.