

ರೋಣ: ಬಸವತತ್ವದಲ್ಲಿ ವಿಶ್ವಾಸವಿರುವವರೆಲ್ಲರೂ ಸಿದ್ಧಾರೂಢರ ತತ್ವ ಸಿದ್ಧಾಂತಗಳನ್ನು ಒಪ್ಪಲೇಬೇಕು. ಅಂತಹ ಮಹಾನ್ ತಪಸ್ವಿ ಸಿದ್ಧಾರೂಢರ ಜ್ಯೋತಿಯ ಉದ್ದೇಶ ಸ್ವಷ್ಟವಾಗಿದೆ ಎಂದು ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಶ್ರೀ ಸಿದ್ಧಾರೂಢರ ಜ್ಯೋತಿ ರಥಯಾತ್ರೆಗೆ ಸ್ವಾಗತ ಹಾಗೂ 22ನೇ ಶಿವಾನುಭವ ಸತ್ಸಂಗ, ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರುಮಲ್ಲಯ್ಯನವರು ಪುರಾಣಮಠ ಅಧ್ಯಕ್ಷತೆ ವಹಿಸಿದ್ದರು. ಉದಯಕುಮಾರ ನಾಯಕ, ಶಂಕರಗೌಡ ರಾಜಶೇಖರ ಪುರಾಣಮಠ, ಸುಭಾಸ ಹೊಸಂಗಡಿ, ಸೋಮು ಚೇರದ, ಸಿದ್ಧಾರೂಢ ಮಠ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು, ಇತರರು ಪಾಲ್ಗೊಂಡಿದ್ದರು. ಡಾ. ವೀರೇಶ ಸತ್ತಿಗೇರಿ ಸ್ವಾಗತಿಸಿ ನಿರೂಪಿಸಿದರು.
ಇದಕ್ಕೂ ಮೊದಲು ಗ್ರಾಮದಲ್ಲಿ ಸಿದ್ಧಾರೂಢರ ಜ್ಯೋತಿ ರಥ ಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ನಂತರ ಕುಂಭ ಮೇಳ, ಡೊಳ್ಳು ಹಾಗೂ ಭಜನೆ ಮೂಲಕ ಗ್ರಾಮದ ಪ್ರಮುಖ ಬೀದಿಗಳ ಮೂಲಕ ರಥ ಸಿದ್ಧಾರೂಢರ ಮಠಕ್ಕೆ ಆಗಮಿಸಿತು.