ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ಜಾರಿಗೆ ತರಲಿ

kavtial shivanna
ಶಿವಣ್ಣ ವಕೀಲ
Published on

ಕವಿತಾಳ: ಸರ್ಕಾರ ರಾಜ್ಯದ ವಲಸೆ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ಜಾರಿಗೊಳಿಸಬೇಕು ಎಂದು ಜಿಲ್ಲಾ ಕುರಿಗಾಹಿಗಳ ಒಕ್ಕೂಟದ ಗೌರವಾಧ್ಯಕ್ಷ ಶಿವಣ್ಣ ವಕೀಲ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯ ಕುರಿ ಕಾಯುವ ಸಾಂಪ್ರದಾಯಿಕ ಕುರಿಗಾಹಿಗಳಿಗೆ ಭದ್ರತೆ ಇಲ್ಲವಾಗಿದೆ. ರಾತ್ರಿ ಸಮಯಲ್ಲಿ ಕಳ್ಳರು ಬಂದು ಲಾರಿಯಲ್ಲಿ ಕುರಿಗಳನ್ನು ಕದ್ದೊಯ್ಯುವುದು, ಕುರಿಗಾಹಿಗಳ ಮೇಲೆ ಹಲ್ಲೆಗಳು ಸೇರಿ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಆದ್ದರಿಂದ ರಾಜ್ಯ ಸರ್ಕಾರ ಕುರಿಗಾಹಿಗಳ ರಕ್ಷಣೆಗಾಗಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಶರಣಬಸವ ಸಾಹುಕಾರ, ರಾಜೇಶ ಬನ್ನಿಗಿಡದ, ಮೌನೇಶ ನಾಯಕ, ಎಡಿಎಂ ಅಕ್ಬರ್, ಮೌನೇಶ ಹಿರೇಕುರುಬರ, ಯಲ್ಲಾಲಿಂಗ, ಅಯ್ಯಪ್ಪ ತೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net