ಒಡೆದಾಡುವ ಪರಂಪರೆ ಬದಲಾಗಲಿ

14snd-4
ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಲಕ್ಷ್ಮಣ, ಪ್ರಮುಖರಾದ ಪಿ.ಬಸವರಾಜಪ್ಪ ಕುರುಕುಂದಿ, ನಿರುಪಾದೆಪ್ಪ ಗುಡಿಹಾಳ ವಕೀಲ, ಕರೇಗೌಡ ಕುರುಕುಂದಿ, ಬಸಲಿಂಗಪ್ಪ ಬಾದರ್ಲಿ ಇತರರಿದ್ದರು.
Published on

ಸಿಂಧನೂರು: ಅನಾದಿ ಕಾಲದಿಂದಲೂ ಮಹನೀಯರು ಪ್ರತಿಪಾದಿಸಿದ ವಿಚಾರಗಳು ಅನುಷ್ಠಾನವಾಗಬೇಕಿದೆ. ಆದರೆ, ಇಲ್ಲಿ ಒಡೆದಾಡುವ ಪರಂಪರೆ ಮುಂದುವರೆದಿದೆ. ಇದು ಬದಲಾಗಬೇಕು ಎಂದು ದಸಂಸ ತಾಲೂಕು ಮಾಜಿ ಅಧ್ಯಕ್ಷ ಎಚ್.ಎನ್.ಬಡಿಗೇರ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶಾಸಕ ಹಂಪನಗೌಡ ಬಾದರ್ಲಿ ಅವರು ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಗಾಂಧಿವೃತ್ತದಲ್ಲಿ ಸಿದ್ಧರಾಮೇಶ್ವರ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಲಕ್ಷ್ಮಣ, ಪ್ರಮುಖರಾದ ಪಿ.ಬಸವರಾಜಪ್ಪ ಕುರುಕುಂದಿ, ನಿರುಪಾದೆಪ್ಪ ಗುಡಿಹಾಳ ವಕೀಲ, ಕರೇಗೌಡ ಕುರುಕುಂದಿ, ಬಸಲಿಂಗಪ್ಪ ಬಾದರ್ಲಿ ಇತರರಿದ್ದರು. ಗಾಯಕಿ ರಂಗಮ್ಮ ಗಲಗ್ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net