ವೈಜ್ಞಾನಿಕ ನೆಲೆಯಲ್ಲಿ ಪುನಶ್ಚೇತನಗೊಳ್ಳಲಿ

NATAKA
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಬಂಡೆ ರಂಗನಾಥೇಶ್ವರ ದೇಗುಲ ಆವರಣದಲ್ಲಿ ಪ್ರಾಯೋಗಿಕ ಬಯಲಾಟ ಅಧ್ಯಯನ ಕೇಂದ್ರವನ್ನು ಆರಂಭಿಸಿ ಮಹಿಳಾ ಸಾಹಿತಿ ಡಾ.ಅಕ್ಕಿ ಸುಜಾತ ಮಾತನಾಡಿದರು. ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ, ಉಪಾಧ್ಯಕ್ಷೆ ಮ್ಯಾಗಳಮನಿ ರುದ್ರಮ್ಮ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಗಂಡುಮೆಟ್ಟಿನ ಕಲೆ ಬಯಲಾಟವು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಪುನಶ್ಚೇತನಗೊಳ್ಳಬೇಕಿದೆ ಎಂದು ಮಹಿಳಾ ಸಾಹಿತಿ ಡಾ.ಅಕ್ಕಿ ಸುಜಾತ ಹೇಳಿದರು.

ತಾಲೂಕಿನ ತಂಬ್ರಹಳ್ಳಿ ಗ್ರಾಮದ ಬಳಿಯ ಐತಿಹಾಸಿಕ ದೇಗುಲ ಶ್ರೀಬಂಡೆ ರಂಗನಾಥೇಶ್ವರ ಬೆಟ್ಟದಲ್ಲಿ ಏಕೀಕರಣ ಟ್ರಸ್ಟ್‌ವತಿಯಿಂದ ಏರ್ಪಡಿಸಿದ್ದ ಬಯಲ ಬೆಳಗು ಬಯಲಾಟ ಪ್ರಾಯೋಗಿಕ ಅಧ್ಯಯನ ಕೇಂದ್ರ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಯುವ ಜನಾಂಗಕ್ಕೆ ಪರಿಚಯಿಸಬೇಕಿದೆ

ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಬಯಲಾಟ ಕಲೆ ರೂಪಗೊಳ್ಳಬೇಕಿದೆ. ಒತ್ತಡದ ಜೀವನ ಶೈಲಿಯಲ್ಲಿ ಜನರು ಮನರಂಜನೆಗೆ ಕೇವಲ ಮೊಬೈಲ್ ದಾಸರಾಗಿದ್ದಾರೆ. ಬಯಲಾಟ ಕಲೆ ಬದುಕಿನ ಮೌಲ್ಯಗಳನ್ನು ತಿಳಿಸುತ್ತದೆ. ದೈಹಿಕ ಸದೃಢತೆ ಮತ್ತು ಮಾನಸಿಕ ಆರೋಗ್ಯಕ್ಕೆ ಬಯಲಾಟ ಕಲೆ ಸಹಕಾರಿಯಾಗಲಿದೆ. ಹೊಸ ಪಠ್ಯದ ಮೂಲಕ ಯುವ ಜನಾಂಗಕ್ಕೆ ಬಯಲಾಟದ ಪರಿಚಯಿಸಬೇಕಿದೆ.

ಒಂದು ತಾಸು ಅವಧಿಯಲ್ಲಿ ಅಗತ್ಯವಾದ್ಯ ಪರಿಕರಗಳನ್ನು ಬಳಸಿ ಶಿಸ್ತು ಪ್ರದರ್ಶನಕ್ಕೆ ಅಧ್ಯಯನ ಅಗತ್ಯವಿದೆ. ರಂಗಸಜ್ಜಿಕೆಯಲ್ಲಿ ಅನಗತ್ಯ ಕಿರುಚಾಟ, ಅಸ್ಪಷ್ಟ್ಟ ಸಂಭಾಷಣೆ, ಅವಧಿ ಮೀರಿ ಪ್ರದರ್ಶನಕ್ಕೆ ಕಡಿವಾಣ ಹಾಕಿ ಹೊಸ ಆಯಾಮದಲ್ಲಿ ಪ್ರದರ್ಶನ ನೀಡುವ ಅಗತ್ಯತೆ ತುಂಬಾ ಇದೆ ಎಂದರು.

ಗದ್ದಿಕೇರಿ ಹಿರೇಮಠದ ಚರಂತೇಶ್ವರ ಸ್ವಾಮೀಜಿ ಬಯಲಾಟ ಅಧ್ಯಯನ ಕೇಂದ್ರದ ಪದಾಧಿಕಾರಿಗಳಿಗೆ ಕಲಾ ಪ್ರತಿಜ್ಞಾವಿಧಿ ಬೋಧಿಸಿದರು.
ತಂಬ್ರಹಳ್ಳಿ ಪಿಎಸೈ ಸುವರ್ಥರವರು ಪದಾಧಿಕಾರಿಗಳಿಗೆ ಕಂಕಣ ಕಟ್ಟುವ ಮೂಲಕ ಚಾಲನೆ ನೀಡಿದರು.

ಜಿಪಂ ಮಾಜಿ ಸದಸ್ಯ ಎಚ್.ಬಿ.ನಾಗನಗೌಡ್ರು ಚಿಂತಕ ಗಣೇಶರಾವ್ ಹವಾಲ್ದಾರ್, ಶಿಕ್ಷಕ ಅಕ್ಕಿ ಬಸವರಾಜ ಮಾತನಾಡಿದರು. ವೇದಿಕೆಯಲ್ಲಿ ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ ಹನುಮೇಶಿ, ಉಪಾಧ್ಯಕ್ಷೆ ಮ್ಯಾಗಳಮನಿ ರುದ್ರಮ್ಮ ದೊಡ್ಡಬಸಪ್ಪ, ಸದಸ್ಯರಾದ ಎಸ್.ಮೆಹಬೂಬ್, ಬಣಕಾರ ಬಸಮ್ಮ, ಸಪ್ಪರದ ಕಮಲಾಕ್ಷಿ, ಧರ್ಮಕರ್ತ ಉದಯಭಾಸ್ಕರ, ಅಧ್ಯಯನ ಕೇಂದ್ರದ ಅಧ್ಯಕ್ಷ ಕೊಳ್ಳಿ ಶೇಖಾರೆಡ್ಡಿ, ಉಪಾಧ್ಯಕ್ಷ ಕಡ್ಡಿ ಕೊಟ್ರೇಶ, ಪದಾಧಿಕಾರಿಗಳಾದ ಸೊಬಟಿ ಹರೀಶ, ಸುಣಗಾರ ಪರಶುರಾಮ, ತಳವಾರ ವಿಠ್ಠಲ, ಬಣಕಾರ ಮಲ್ಲಿಕಾರ್ಜುನ, ನಿಜಲಿಂಗ ಹರಿಜನ, ಜ್ಯೋತಿ ಬಸವರಾಜ, ಕೊನ್ನಾರಿ ಪ್ರಭಾಕರ, ಸಿಂದೋಗಿ ನಾಗರಾಜ, ಬಾಬುಸಾಬ್, ಟಿ.ಪಾಂಡುರಂಗ, ಹುಸೇನಭಾಷಾ, ಪ್ರಕಾಶ ಕಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net