ಶಾಲೆ ಅಭಿವೃದ್ಧಿಗೆ ಸಹಕರಿಸಲಿ

7Rayabag2
Published on

ರಾಯಬಾಗ: ಅಲ್ಪಸಂಖ್ಯಾತ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಕಲ ಸೌಲಭ್ಯದೊಂದಿಗೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ಮಾರ್ಡನ್ ಐಟಿಐ ಕಟ್ಟಡದಲ್ಲಿ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗುರುವಾರ ಹಮ್ಮಿಕೊಂಡಿದ್ದ ಮೌಲಾನಾ ಅಜಾದ್ ಸರ್ಕಾರಿ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಉದ್ಘಾಟನೆ ಮತ್ತು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಇಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಕರು ಸರ್ಕಾರದಿಂದ ಬರುವ ಸವಲತ್ತು ಮಕ್ಕಳಿಗೆ ಒದಗಿಸಬೇಕು.ಅಲ್ಪಸಂಖ್ಯಾತ ಸಮುದಾಯದವರು ಈ ಶಾಲೆಗೆ ಜಾಗ ಒದಗಿಸಿದರೆ, ಕಟ್ಟಡ ಇನ್ನೂ ಚೆನ್ನಾಗಿ ನಿರ್ಮಿಸಲಾಗುವುದು ಎಂದರು.

ಬಿಇಒ ಬಸವರಾಜಪ್ಪ ಆರ್., ಪಪಂ ಅಧ್ಯಕ್ಷ ಅಶೋಕ ಅಂಗಡಿ, ವಕ್ಫ ಬೋರ್ಡ್ ತಾಲೂಕಾಧ್ಯಕ್ಷ ಮುಸ್ತಾಕ್ ಮುಲ್ಲಾ, ಸಿಆರ್‌ಪಿ ಆರ್.ಎಂ.ಕುರಾಡೆ, ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಸದಾನಂದ ಹಳಿಂಗಳಿ, ಜಿಯಾವುಲ್ಲ ಮುಲ್ಲಾ, ಕಲಂದರ ಅತ್ತಾರ, ಫಾರೂಕ್ ಮೊಮಿನ, ನಜೀರ್ ಮುಲ್ಲಾ, ಆರ್ೀ ಮೌಲಾನಾ, ರಶೀದ್ ಪಠಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net