ಗ್ರಾಮೀಣರಿಗೆ ಆರೋಗ್ಯ ಅರಿವು ಮೂಡಿಸಲಿ

13-KLG-4
Published on


ಕಲಘಟಗಿ: ಗ್ರಾಮೀಣ ಜನರಿಗೆ ಆರೋಗ್ಯದ ಕುರಿತು ಅರಿವು ಹಾಗೂ ಜ್ಞಾನ ಮೂಡಿಸುವುದು ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಂಗಮೇಶ್ವರ ಗ್ರಾಪಂ ಪಿಡಿಒ ಎ.ಎಚ್. ಮನಿಯಾರ ಹೇಳಿದರು.
ತಾಲೂಕಿನ ಗಂಭ್ಯಾಪುರ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಜನರ ಆರೋಗ್ಯದ ಅರಿವು ಮತ್ತು ಜನರ ಜೀವನ ಮಟ್ಟ ಹೆಚ್ಚಿಸುವ ಕುರಿತು ಅವರು ಮಾಹಿತಿ ನೀಡಿದರು. ಗ್ರಾಮೀಣ ಆರೋಗ್ಯದ ಮಟ್ಟ ಸುಧಾರಿಸಿ ಸುಸ್ಥಿರ ಸಮಾಜ ನಿರ್ವಿುಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷ ಬಸವರಾಜ ನೇಸರಗಿ, ಸದಸ್ಯರಾದ ಅಜಿತ ರೊಟ್ಟಿ, ಬಸವರಾಜ ಬಾಗಲಕೋಟೆ, ನಿಂಗವ್ವ ದೇವಗೇರಿ, ಅನಸೂಯಾ, ರವಿ ಹುಬ್ಬಳ್ಳಿ, ಸಂಪನ್ಮೂಲ ವ್ಯಕ್ತಿಗಳಾದ ಅನಿತಾ ಪೋಲೆ ಮತ್ತು ಸುನಂದಾ ಗಲಗಲಿ, ಪಿಡಿಒ ಗೀತಾ ಬಾನಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net