ರೋಟರಿ ಸದಸ್ಯತ್ವ ಆಂದೋಲನ ಚುರುಕಾಗಲಿ

nrp 2.
Published on

ಎನ್.ಆರ್.ಪುರ: ಭಾರತ ದೇಶದಲ್ಲಿ 1.75 ಲಕ್ಷ ರೋಟರಿ ಕ್ಲಬ್‌ಗಳಿದ್ದು ಇದರಲ್ಲಿ 6 ಲಕ್ಷ ರೋಟರಿ ಸದಸ್ಯರು ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ರೋಟರಿ ಕ್ಲಬ್‌ನ 3191 ರೋಟರಿ ಜಿಲ್ಲೆಯ ಐಪಿಡಿಜಿ ಸತೀಶ್ ಮಾದವನ್ ತಿಳಿಸಿದರು.

ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್‌ನ ಪದವಿ ಸ್ವೀಕಾರ ಸಮಾರಂಭದಲ್ಲಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ಕಣಿವೆ ವಿನಯ ಹಾಗೂ ಕಾರ್ಯದರ್ಶಿ ಎಸ್.ಎನ್.ಲೋಕೇಶ್‌ಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಸದಸ್ಯರ ಸಂಖ್ಯೆ ಕುಸಿಯುತ್ತಿದೆ. 10 ಸಾವಿರ ರೋಟರಿ ಸದಸ್ಯರು ರೋಟರಿ ಕ್ಲಬ್ ಬಿಟ್ಟಿದ್ದಾರೆ. 150 ರೋಟರಿ ಕ್ಲಬ್ ಮುಚ್ಚಿದೆ. ಸದಸ್ಯತ್ವ ಆಂದೋಲನ ಚುರುಕಾಗಿ ನಡೆಯಬೇಕಾಗಿದೆ. ಸರ್ಕಾರ ಮಾಡದ ಅನೇಕ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು.

ವಲಯ 6ರ ಅಸಿಸ್ಟಂಟ್ ಗವರ್ನರ್ ಜಿ.ರಾಜಗೋಪಾಲ ಜೋಷಿ ಮಾತನಾಡಿ, ಸಮಾಜಕ್ಕಾಗಿ ಬದುಕುವುವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ. 1905ರಲ್ಲಿ ರೋಟರಿ ಕ್ಲಬ್ 4 ಜನರಿಂದ ಪ್ರಾರಂಭವಾಗಿ ಈಗ ವಿಶ್ವದ ಎಲ್ಲ ಕಡೆ ವಿಸ್ತಾರವಾಗಿದೆ. ಸೇವೆಯೇ ರೋಟರಿ ಗುರಿಯಾಗಿದೆ. ರೋಟರಿ ಸದಸ್ಯರು ಸೇವೆ ಮೂಲಕ ರೋಟರಿ ಕ್ಲಬ್ ನ ಗೌರವ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿಕಲ ಚೇತನ ವಿದ್ಯಾರ್ಥಿನಿಗೆ ವೀಲ್‌ಚೆರ್, ವಿದಯಾರ್ಥಿಗಳಾದ ಪಾವನಿ.ಸಿ.ಜೈನ್, ಸುಜನ್, ಕೌಸಿಕ್, ಪಪಂ ಅಧ್ಯಕ್ಷೆ ಜುಬೇದ, ನಿರ್ದೇಶಕ ಎನ್.ಎಲ್.ಮನೀಶ, ಎಸ್.ಎಸ್.ಶಾಂತಕುಮಾರ್ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ನ ನಿರ್ಗಮಿತ ಅಧ್ಯಕ್ಷ ಜಿ.ಆರ್.ದಿವಾಕರ, ನೂತನ ಅಧ್ಯಕ್ಷ ಕಣಿವೆ ವಿನಯ, ಕಾರ್ಯದರ್ಶಿ ಎಸ್.ಎನ್.ಲೋಕೇಶ್, ಮಧು ವೆಂಕಟೇಶ್, ಭವ್ಯ, ನೀತಾ ಪ್ರದೀಪ್, ಬಿಂದು ವಿಜಯ್, ರಾಧಿಕಾ ಅರ್ಜುನ್, ರೋಟರಿ ಕ್ಲಬ್‌ನ ಜೋನಲ್ ಲೆಪ್ಟಿನೆಂಟ್ ನಟರಾಜಗೋಗಟೆ, ಡಾ.ಮಧುರಾಣಿ ಗೌಡ, ಭವ್ಯ ಸಂತೋಷ, ನೀತಾ ಪ್ರದೀಪ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net