ವರದಿಗಾರಿಕೆ ಬೆಳಕು ಚೆಲ್ಲುವಂತಿರಲಿ

25ATHANIGRAMIN1.jpg
Published on

ಅಥಣಿ ಗ್ರಾಮೀಣ: ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿ ಸಮಾಜದ ಸ್ವಾಸ್ಥ ಕಾಪಾಡುವುದು ಪ್ರತಿಯೊಬ್ಬ ಪತ್ರಕರ್ತನ ಜವಾಬ್ದಾರಿ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿದರು. ಶಿವು ಗುಡ್ಡಾಪುರ, ಸಿದ್ದರಾಮ ಯರನಾಳ, ಡಾ.ಸತೀಶ ಮೋಹಿತೆ, ಪ್ರಕಾಶ ಪೂಜಾರಿ, ಜಗದೀಶ ಖೊಬ್ರಿ, ಬಸಪ್ಪ ಚಮಕೇರಿ ಇತರರಿದ್ದರು.  

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ರಚನಾತ್ಮಕ ಸುದ್ದಿಗಳಿಗಿಂತ ರೋಚಕ ಸುದ್ದಿಗಳಿಗೆ ಆದ್ಯತೆ ಹೆಚ್ಚಾಗುತ್ತಿದ್ದು, ಪತ್ರಕರ್ತರು ಮಾಡುವ ವರದಿಗಳು ಬೆಳಕು ಚೆಲ್ಲುವಂತಿರಬೇಕು ಎಂದರು. ಆಗಸ್ಟ್ 10 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಕೊಕಟನೂರ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ, ಕಷಿ ಮಹಾವಿದ್ಯಾಲಯ ಶಂಕುಸ್ಥಾಪನೆ, ಸತ್ತಿ ಮತ್ತು ರಡ್ಡೇರಹಟ್ಟಿ ಗ್ರಾಮದ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ಹಾಗೂ ಅಥಣಿ ಪಟ್ಟಣದ ಬಸವೇಸ್ವರ ವೃತ್ತ ಉದ್ಘಾಟಿಸಲಿದ್ದಾರೆ ಎಂದರು.

ಶಿವು ಗುಡ್ಡಾಪುರ, ಪ್ರಾಚಾರ್ಯ ಸಿದ್ದರಾಮ ಯರನಾಳ, ಪತ್ರಕರ್ತರಾದ ಜಗದೀಶ ಖೋಬ್ರಿ ಹಾಗೂ ಪ್ರಕಾಶ ಪೂಜಾರಿ ಮಾತನಾಡಿದರು. ಪ್ರಾಚಾರ್ಯ ಹಾಗೂ ಬೋಧಕರು ಗಣ್ಯರನ್ನು ಹಾಗೂ ಪತ್ರಕರ್ತರನ್ನು ಸತ್ಕರಿ ಗೌರವಿಸಿದರು. ಪತ್ರಕರ್ತರಾದ ಮೋಹನ ಪಾಟಣಕರ, ಬಸಪ್ಪ ಚಮಕೇರಿ, ಪ್ರೊ.ರಾಜೇಶ ಜಾಧವ, ಪರಪ್ಪ ಮಗದುಮ್ಮ, ಸತೀಶ ನಾಯಕ, ಕಪಿಲ ಕಾಂಬಳೆ, ಡಾ.ಪ್ರಭಾಕರ ಖ್ಯಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net