

ರಿಪ್ಪನ್‌ಪೇಟೆ: ಹೊಂಬುಜ ಜೈನಮಠದಲ್ಲಿ ಶ್ರಾವಣ ಮಾಸದ ಮೂರನೆಯ ಸಂಪತ್ ಶುಕ್ರವಾರದ ಅಂಗವಾಗಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ಪೂಜೆ ಸಲ್ಲಿಸಿ, ಲಪುಷ್ಪ, ಧಾನ್ಯ, ಇಷ್ಟನೈವೇದ್ಯಗಳನ್ನು ಸಮರ್ಪಿಸಲಾಯಿತು. ಇಳೆಗೆ ಮಳೆ ಬರಲಿ, ಕೃಷಿಕರ ಬೆಳೆ ಸಮೃದ್ಧವಾಗಲಿ, ಜನಜೀವನ ಸುಖಕರವಾಗಲೆಂದು ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಭಕ್ತಂದದವರನ್ನು ಆಶೀರ್ವದಿಸಿ ಹರಸಿದರು. ದೇಶದ ವಿವಿಧೆೆಡೆಯ ಭಕ್ತರು, ರಾಜ್ಯದ ಎಲ್ಲ ಜಿಲ್ಲೆಗಳ ವಿಶೇಷವಾಗಿ ಮಹಾರಾಷ್ಟ್ರದ ಕೊಲ್ಲಾಪುರದ ಜೈನರು ಪೂಜಾ ಹಾಗೂ ಭೋಜನ ಸೇವೆಯನ್ನು ನಡೆಸಿಕೊಟ್ಟರು. ಆಗಮಿಸಿದ್ದ ಭಕ್ತಾದಿಗಳಿಗೆ ಅಭಿಷ್ಠ ಪ್ರಸಾದ ಭವನದಲ್ಲಿ ಸೂಕ್ತ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.