ಸಂಘಕ್ಕೆ ಹಾಕುವ ಹಾಲಿನ ಗುಣಮಟ್ಟ ಹೆಚ್ಚಿರಲಿ

HALU TUKADA YANTRA
Published on

ಸಿದ್ದಾಪುರ: ರಾಜ್ಯ ಸರ್ಕಾರ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಿಸಿದ್ದು, ಇದರ ಪ್ರಯೋಜನವನ್ನು ಎಲ್ಲ ಹಾಲು ಉತ್ಪಾದಕರು ಪಡೆದುಕೊಳ್ಳಬೇಕು. ಅದರೊಂದಿಗೆ ಸಂಘಕ್ಕೆ ಹಾಲು ನೀಡುವಾಗ ಹಾಲಿನ ಗುಣಮಟ್ಟ ಹೆಚ್ಚಿಸಬೇಕು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ಹೇಳಿದರು.

ತಾಲೂಕಿನ ನಿಡಗೋಡಿನ ಬಿಎಂಸಿನಲ್ಲಿ (ಹಾಲು ಶೀಥಲಿ ಕೇಂದ್ರ) ನೂತನವಾಗಿ ಆರಂಭಗೊಂಡ ದೊಡ್ಡಜಿಡ್ಡಿ, ಹಕ್ಲಮನೆ-ಕಿಲಾರ, ಗವಿನಗುಡ್ಡ-ಬಾಳೇಕೈ ಹಾಗೂ ಲಂಬಾಪುರ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಧಾರವಾಡ ಹಾಲು ಒಕ್ಕೂಟದ 50 ಸಾವಿರ ರೂ. ಅನುದಾನದಲ್ಲಿ ಮಿಲ್ಕೋ ಆನೈಲೈಸರ್ಮತ್ತು ತೂಕದ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಸಂಘದ ಪ್ರತಿಯೊಬ್ಬ ಸದಸ್ಯರೂ ಸಂಘಕ್ಕೆ ಗುಣಮಟ್ಟದ ಹಾಲು ನೀಡುವುದರೊಂದಿಗೆ ಹೆಚ್ಚಿನ ಹಣ ಪಡೆದುಕೊಳ್ಳಬೇಕು. ಇದರಿಂದ ಸಂಘದ ಅಭಿವೃದ್ಧಿಯೊಂದಿಗೆ ಹಾಲು ಉತ್ಪಾದಕರೂ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಸಾಧ್ಯ ಎಂದರು.

ನಿಡಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ. ಗೌಡರ್ ಹೂಕಾರ್, ನಿರ್ದೇಶಕ ಲಕ್ಷ್ಮೀನಾರಾಯಣ ಹೆಗಡೆ, ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ತಾಲೂಕಿನ ಸಹಾಯಕ ವ್ಯವಸ್ಥಾಪಕರಾದ ಡಾ. ವಿನಾಯಕ ಬಿರಾದಾರ, ತಾಲೂಕು ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ., ಚಂದನ ನಾಯ್ಕ, ಸಂಘದ ಮುಖ್ಯಕಾರ್ಯನಿರ್ವಾಹಕ ವೆಂಕಟೇಶ ನಾಯ್ಕ ಹಾಗೂ ವಿವಿಧ ಹಾಲು ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು, ಸದಸ್ಯರುಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net